#Exclusive NewsTop Newsಜಿಲ್ಲೆಸುದ್ದಿ

ಕರಾವಳಿಯಲ್ಲಿ ಕೋಮುನಿಗ್ರಹ ಪಡೆಗೆ ಪರಮೇಶ್ವರ್ ಚಾಲನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ನಿಗ್ರಹಕ್ಕೆ ವಿಶೇಷ ಕಾರ್ಯಪಡೆ(ಎಸ್​ಎಎಫ್​)ಗೆ ಚಾಲನೆ ಸಿಕ್ಕಿದೆ. ಮಂಗಳೂರಿನಲ್ಲಿ ಎಸ್​ಎಎಫ್​​ಗೆ ಗೃಹ ಸಚಿವ ಪರಮೇಶ್ವರ್​, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್​ ಗುಂಡೂರಾವ್​, ಪೊಲೀಸ್​ ಮಹಾ ನಿರ್ದೇಶಕ ಡಾ ಎಂ ಎ ಸಲೀಂ ಚಾಲನೆ ನೀಡಿದ್ದಾರೆ.

ಇನ್ಮುಂದೆ ಪ್ರಚೋದನಾ ಭಾಷಣ ಮಾಡಿದ್ರೆ, ಪ್ರಚೋದನಕಾರಿ ಪೋಸ್ಟ್​ ಹಾಕಿದ್ರೆ, ಎಫ್​ಐಆರ್​ ಹಾಕಿ ಅರೆಸ್ಟ್ ಮಾಡುವುಕ್ಕೆ ಪೊಲೀಸರಿಗೆ ವಿಶೇಷ ಅಧಿಕಾರ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗದಲ್ಲಿ ಶಾಂತಿ ನೆಲೆಸಬೇಕು. ಇದಕ್ಕಾಗಿ ಎಸ್​ಎಎಫ್​ ರಚನೆ ಮಾಡಿದ್ದೇವೆ.. ಕೋಮು ನಿಗ್ರಹ ಕಾರ್ಯಪಡೆ ಇಡೀ ದೇಶದಲ್ಲೇ ಮೊದಲ ಕಾರ್ಯಪಡೆ ಎಂದು
ಗೃಹ ಸಚಿವ ಡಾ ಜಿ ಪರಮೇಶ್ವರ್​ ಹೇಳಿಕೆ ನೀಡಿದ್ದಾರೆ.

ಚಾಲನೆಗೆ ಮುನ್ನ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಸಚಿವ ಪರಮೇಶ್ವರ್​ ಸರಣಿ ಸಭೆ ನಡೆಸಿದ್ರು. ಮಂಗಳೂರು ಪೊಲೀಸ್​ ಆಯುಕ್ತ ಸುಧೀರ್​ ಕುಮಾರ್​ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ ಅರುಣ್​ ಕೆ ಜೊತೆಗೆ ಮಹತ್ವದ ಮಾತುಕತೆ ನಡೆಸಿದ್ರು. ಈ ವೇಳೆ, ವಿವಿಧ ಸಂಘಟನೆಗಳ ಮುಖಂಡರು, ಗೃಹ ಸಚಿವ ಪರಮೇಶ್ವರ್​ ಭೇಟಿಯಾಗಿ ಮನವಿ ಸಲ್ಲಿಸಿದ್ರು.

ವಿಶೇಷ ಕಾರ್ಯಪಡೆಯಿಂದ ಇನ್ಮುಂದೆ ಕರಾವಳಿಯಲ್ಲಿ ಶಾಂತಿ ನೆಲೆಸಲಿದೆ ಎನ್ನುವ ಆಶಾಭಾವನೆ ಸ್ಥಳೀಯರಲ್ಲಿ ಮೂಡಿದೆ

Comments (0)

Your email address will not be published. Required fields are marked *

Back to top button