ಬೆಂಗಳೂರು: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು ನಿಜ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು. ದೆಹಲಿ ಭೇಟಿಯ ಸಂದರ್ಭದಲ್ಲಿ ಪರಮೇಶ್ವರ್ ಅವರು ರಾಹುಲ್‌ ಗಾಂಧಿ ಜೊತೆಗೆ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಈ ಕುರಿತಾಗಿ ಸದಾಶಿವ ನಗರ ನಿವಾಸದಲ್ಲಿ ಬುಧವಾರ ಮಾತನಾಡಿದ ಅವರು,‌ ಪರಮೇಶ್ವರ್ ನಾಯಕತ್ವ ವಹಿಸುವ ಸಂದರ್ಭ ಬರುತ್ತಾ ಎಂಬ ಪ್ರಶ್ನೆಗೆ, ಆ ಪ್ರಶ್ನೆಯೇ ಬರಲ್ಲ, ನಾನು ಅದಕ್ಕೆ ಉತ್ತರ ಕೊಡುವುದಿಲ್ಲ. ರಾಹುಲ್ ಗಾಂಧಿ ನನ್ನ ಜೊತೆ ಪ್ರತ್ಯೇಕ ಮಾತನಾಡಿದ್ದು ನಿಜ. ಆದರೆ ಏನು ಮಾತನಾಡಿದ್ದೇನೆ ಎಂದು ನೀವೇ ಊಹೆ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.

ನಾನು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಕೊಟ್ಟ ಸೂಚನೆ, ಕೆಲಸ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಪಕ್ಷದ ಕೆಲವು ವಿಚಾರಗಳ ಬಗ್ಗೆ ಅವರು ನನ್ನ ಜೊತೆ ಮಾತನಾಡಿದ್ದಾರೆ. ಅದರ ಹೊರತಾಗಿ ಏನೂ ಚರ್ಚೆ ಮಾಡಿಲ್ಲ ಎಂದರು.

ಇನ್ನು ರಾಜ್ಯಪಾಲರ ನಡೆಯ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ರಾಜ್ಯಾದ್ಯಂತ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಲಿದೆ. ಜೊತೆಗೆ ರಾಜ್ಯಪಾಲರನ್ಮು ಶಾಸಕರು, ಸಂಸದರು ಭೇಟಿ ಮಾಡಿ ಮನವಿ ಮಾಡುತ್ತೇವೆ. ನ್ಯಾಯಾಲಯದ ಮುಂದಿನ ತೀರ್ಮಾನ ನೋಡಿಕೊಂಡು ರಾಷ್ಟ್ರಪತಿ ಅವರನ್ನು ಭೇಟಿ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದರು‌.

ಆಗಸ್ಟ್ 31 ರಂದು ರಾಜ್ಯಪಾಲರ ವಿರುದ್ದ ಪಕ್ಷದ ವತಿಯಿಂದ ಪ್ರೊಟೆಸ್ಟ್ ಮಾಡಲಾಗುತ್ತೆ ಅಂತ ಗೃಹ ಸಚಿವ ಪರಮೇಶ್ವರ್ ಹೆಳಿದ್ದಾರೆ. ಶಾಸಕರೆಲ್ಲರೂ ರಾಜ್ಯಪಾಲರಿಗೆ ಮನವಿ ಕೊಡ್ತಾರೆ .ಕೋರ್ಟ್ ನಲ್ಲಿ ಏನೆಲ್ಲಾ ತೀರ್ಮಾನ ಬರುತ್ತೆ ನೋಡಬೇಕು. ಬಿಜೆಪಿಯವರು ರಾಷ್ಟ್ರಮಟ್ಟದಲ್ಲಿ ಮಾಡಲಿ. ನಾವು ರಾಷ್ಟ್ರ ಮಟ್ಟದಲ್ಲಿ ಪ್ರತಿಭಟನೆ ಮಾಡ್ತೇವೆ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದರು.

By Veeresh

Leave a Reply

Your email address will not be published. Required fields are marked *

Verified by MonsterInsights