ಮಂಗಳೂರು: ಸಿಗ್ನಲ್ ಬಳಿ ನಿಂತಿದ್ದ ಆಟೊ ರಿಕ್ಷಾಗೆ ಟ್ಯಾಂಕರ್ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಪಣಂಬೂರಿನ ರಾಷ್ಟ್ರೀಯ ಹೆದ್ದಾರಿ 66ರ ಸಿಗ್ನಲ್ ಬಳಿ ನಡೆದಿದೆ..
ಪಣಂಬೂರು ಸಿಗ್ನಲ್‌ನಲ್ಲಿ ವಾಹನಗಳು ನಿಂತಿದ್ದಾಗ ಈ ಘಟನೆ ನಡೆದಿದೆ. ಮುಂಭಾಗದಲ್ಲಿ ಒಂದು ಟ್ಯಾಂಕರ್ ನಿಂತಿದ್ದು, ಅದರ ಹಿಂದೆ ಒಂದು ಆಟೋರಿಕ್ಷಾ ನಿಂತಿತ್ತು. ಹಿಂಭಾಗದಿಂದ ಬಂದ ಮತ್ತೊಂದು ಟ್ಯಾಂಕರ್ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದು, ನಂತರ ಅದು ಮುಂಭಾಗದಲ್ಲಿದ್ದ ಕಾರಿಗೆ ಡಿಕ್ಕಿ ಹೊಡೆದು, ಮುಂದಿದ್ದ ಮತ್ತೊಂದು ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ.
ಎರಡು ಟ್ಯಾಂಕರ್ ಗಳ ನಡುವೆ ಸಿಲುಕಿದ ಆಟೋ ರಿಕ್ಷಾ ನಜ್ಜುಗುಜ್ಜಾಗಿದೆ. ಆಟೋ ರಿಕ್ಷಾ ಚಾಲಕ ಮತ್ತು ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


