Tuesday, June 24, 2025
26.6 C
Bengaluru
Google search engine
LIVE
ಮನೆ#Exclusive News“ನಾನು ಟ್ರಂಪ್‌ ಮಗಳು ಎಂದು ಹೇಳಿಕೊಂಡ ಪಾಕಿಸ್ತಾನಿ ಯುವತಿ”

“ನಾನು ಟ್ರಂಪ್‌ ಮಗಳು ಎಂದು ಹೇಳಿಕೊಂಡ ಪಾಕಿಸ್ತಾನಿ ಯುವತಿ”

ಅಮೆರಿಕದಲ್ಲಿ ನವೆಂಬರ್‌ 5 ರಂದು ಅಧ್ಯಕ್ಷೀಯ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ತಮ್ಮ ಎದುರಾಳಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರನ್ನು ಸೋಲಿಸಿ ಭರ್ಜರಿ ಗೆಲುವನ್ನು ಸಾಧಿಸುವ ಮೂಲಕ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಈ ನಡುವೆ ಟ್ರಂಪ್‌ಗೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡುತ್ತಿದ್ದು, ಪಾಕಿಸ್ತಾನಿ ಯುವತಿಯೊಬ್ಬಳು ನಾನು ಟ್ರಂಪ್‌ ಮಗಳು, ಮೆಲಾನಿಯ ನನ್ನನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ ನನ್ನ ತಾಯಿ ನನ್ನನ್ನು ಪಾಕಿಸ್ತಾನಕ್ಕೆ ವಾಪಸ್‌ ಕರೆದುಕೊಂಡು ಬಂದ್ರು ಎಂಬ ಸ್ಟೇಟ್‌ಮೆಂಟ್‌ ನೀಡಿದ್ದಾಳೆ. ಸದ್ಯ ಈ ದೃಶ್ಯ ಸಖತ್‌ ವೈರಲ್‌ ಆಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಯುವತಿ ತಾನು ಮುಸ್ಲಿಂ ಮತ್ತು ಪಂಜಾಬಿ ಮೂಲಕ್ಕೆ ಸೇರಿದವಳು ಆದರೆ ನನ್ನ ತಂದೆ ಟ್ರಂಪ್‌ ಎಂದು ಉರ್ದುವಿನಲ್ಲಿ ಹೇಳಿದ್ದಾಳೆ. ಜೊತೆಗೆ ಮೆಲಾನಿಯಾ ನನ್ನನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ ನನ್ನ ತಾಯಿ ನನ್ನನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಬಂದ್ರು ಎಂದು ಹೇಳಿದ್ದಾಳೆ. 2018 ನೇ ಇಸವಿಯಲ್ಲಿ ನಡೆದ ಘಟನೆ ಇದಾಗಿದ್ದು, ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ, ಈ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್‌ ಆಗಿದೆ.

 

 

“ನಾನು ಟ್ರಂಪ್‌ ಮಗಳು ಎಂದು ಹೇಳಿಕೊಂಡ ಪಾಕಿಸ್ತಾನಿ ಯುವತಿ” ಎಂಬ ಶೀರ್ಷಿಕೆನ್ನು ಬರೆಯಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಪಾಕಿಸ್ತಾನಿ ಯುವತಿಯೊಬ್ಬಳು ನಾನು ಟ್ರಂಪ್‌ ಮಗಳು, ಆದರೆ ಮೆಲಾನಿಯಾ ನನ್ನನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ ನಾನು ಪಾಕಿಸ್ತಾನಕ್ಕೆ ಬರಬೇಕಾಯಿತು ಎಂದು ಉರ್ದು ಭಾಷೆಯಲ್ಲಿ ಹೇಳುವಂತಹ ದೃಶ್ಯವನ್ನು ಕಾಣಬಹುದು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments