#Exclusive Newsದೇಶ/ವಿದೇಶ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ಉಗ್ರ ದಾಳಿ – 27 ಪ್ರವಾಸಿಗರ ಹತ್ಯೆ

ಮಿನಿ ಸ್ವಿಡ್ಜರ್ಲ್ಯಾಂಡ್ ಖ್ಯಾತಿಯ ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಪ್ರಾಂತ್ಯದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ಪೈಶಾಚಿಕ ಕೃತ್ಯ ಎಸಗಿದ್ದಾರೆ. ಪೈಶಾಚಿಕ ದಾಳಿಯಲ್ಲಿ ಕನಿಷ್ಠ 27 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದು, ಇನ್ನೂ 20 ಪ್ರವಾಸಿಗರ ಸ್ಥಿತಿ ಚಿಂತಾಜನಕವಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಅತಿ ದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ.

ಮಂಗಳವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬೈಸರನ್ ಪ್ರಾಂತ್ಯದಲ್ಲಿದ್ದ ಅಂದಾಜು 40 ಪ್ರವಾಸಿಗರನ್ನು ಅರಣ್ಯ ಪ್ರದೇಶದಿಂದ ನುಗ್ಗಿಬಂದ ಭಯೊತ್ಪಾದಕರು ಕರ‍್ನರ್ ಮಾಡಿದ್ರು.. ವಿಚಕ್ಷಣ ರಹಿತವಾಗಿ ಗುಂಡಿನದಾಳಿಗರೆದರು.. ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದ್ರೆ ಇನ್ನೂ ಕೆಲವರು ತೀವ್ರವಾಗಿ ಗಾಯಗೊಂಡರು.

ಭಯೋತ್ಪಾದಕರ ಪೈಶಾಚಿಕ ಕೃತ್ಯದ ದೃಶ್ಯಗಳು.. ಮೃತರ ಬಂಧು ಬಾಂಧವರ ಆಕ್ರಂದನ ಮುಗಿಲುಮುಟ್ಟಿರುವ ದೃಶ್ಯಗಳು ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಭಯೋತ್ಪಾದಕರು ಅಟ್ಟಹಾಸ ಮೆರೆದ ಸ್ಥಳಕ್ಕೆ ಕೇವಲ ಕಾಲ್ನಡಿಗೆ ಇಲ್ಲವೇ ಕುದುರೆ ಮೂಲಕ ತಲುಪಬಹುದಾದ ಸ್ಥಳ ಆಗಿರೋದು ಸಾವು ನೋವು ಹೆಚ್ಚಲು ಕಾರಣವಾಗಿದೆ. ಇಲ್ಲಿ ಕಾರ‍್ಯಾಚರಣೆ ವಿಳಂಬವಾದ ಕಾರಣ ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರುತ್ತಿದೆ.

ಬೈಸರನ್ ಪ್ರಾಂತ್ಯದಲ್ಲಿ ಗುಂಡಿನ ಶಬ್ಧ ಕೇಳಿಬರುತ್ತಲೇ ಭದ್ರತಾ ಪಡೆಗಳು ಅರ‍್ಟ್ ಆಗಿ ಸ್ಥಳಕ್ಕೆ ದೌಡಾಯಿಸಿದ್ವು. ಆದ್ರೆ,ಅಷ್ಟರಲ್ಲಿ ಆಗಬೇಕಾದ ಡ್ಯಾಮೇಜ್ ಆಗಿಹೋಗಿತ್ತು. ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯ್ತು. ಅಷ್ಟೊತ್ತಿಗಾಗಲೇ ಸ್ಥಳೀಯರು, ಕುದುರೆಗಳ ನೆರವಿನಿಂದ ಹಲವು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ರು.
ಭಯೋತ್ಪಾದಕರ ಅಟ್ಟಹಾಸದ ಪರಿಣಾಮ ಇದೀಗ ಪೆಹಲ್ಗಾಮ್ ಸ್ಮಶಾಣವಾಗಿ ಮಾರ್ಪಟ್ಟಿದೆ.ಲಷ್ಕರ್ ಉಗ್ರರ ಬೇಟೆಗೆ ಭದ್ರತಾ ಪಡೆಗಳು ದೊಡ್ಡ ಮಟ್ಟದಲ್ಲಿ ಕೂಂಬಿಂಗ್ ಕಾರ‍್ಯಾಚರಣೆ ನಡೆಸುತ್ತಿವೆ.ಎನ್ಐಎ ಕೂಡ ಫೀಲ್ಡಿಗೆ ಇಳಿದಿದೆ.

Comments (0)

Your email address will not be published. Required fields are marked *

Back to top button