ಅಂಕೋಲಾ : ಪರಿಸರ ಸಂರಕ್ಷಣೆಯ ಮಹತ್ತರ ಕಾರ್ಯಕ್ಕೆ ಐದೂವರೆ ದಶಕಗಳ ಕಾಲದಿಂದ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ವೃಕ್ಷಮಾತೆ, ವನದೇವತೆಯೆಂದೇ ಹೆಸರುವಾಸಿಯಾದ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ (86) ಅವರು ಸೋಮವಾರ ಸಂಜೆ ತಾಲೂಕಿನ ಹೊನ್ನಳ್ಳಿಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.

ಕಳೆದ 9 ತಿಂಗಳಿನಿಂದ ಪಾರ್ಶ್ವವಾಯು ಪೀಡಿತರಾಗಿದ್ದ ತುಳಸಿ ಗೌಡ ಅವರು ಮಂಗಳೂರು, ಮಣಿಪಾಲ ಹಾಗೂ ಕಾರವಾರದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಕಳೆದ 10 ದಿನದಿಂದ ತೀವ್ರ ಅಸ್ವಸ್ಥರಾಗಿದ್ದು,ಹೊನ್ನಳ್ಳಿಯ ಸ್ವಗೃಹದಲ್ಲಿದ್ದರು. ಸೋಮವಾರ ಸಂಜೆ ನಿಧನರಾಗಿದ್ದಾರೆ.  ತುಳಸಿ ಗೌಡ ಅವರ ಮಹತ್ಕಾರ್ಯವನ್ನು ಗಮನಿಸಿದ ಕೇಂದ್ರ ಸರ್ಕಾರ 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು. ಪರಿಸರ ಸಂರಕ್ಷಣೆ ತುಳಸಿ ಗೌಡ ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸಿ ದ್ದರು. 5 ದಶಕಕ್ಕೂ ಹೆಚ್ಚು ಕಾಲ ಪರಿಸರ ರಕ್ಷಣೆಗಾಗಿ ತಮ್ಮ ಜೀವನ ಮುಡಿಪಾಗಿ ಟ್ಟಿದ್ದರು. ಹೀಗಾಗಿ, ಅವರನ್ನು ವೃಕ್ಷಮಾತೆ, ವನದೇವತೆ ಯೆಂದೇ ಕರೆಯಲಾಗುತ್ತಿತ್ತು. ಸ್ವಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ ಮೃತರ ಅಂತ್ಯಕ್ರಿಯೆಯನ್ನು ಸ್ವಗ್ರಾಮವಾದ ಹೊನ್ನಳ್ಳಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಗುವುದು. ಅಂತಿಮ ದರ್ಶನಕ್ಕೆ ಅವರ ಸ್ವಗೃಹದ ಬಳಿ ಅವಕಾಶ ಕಲ್ಪಿಸಲಾಗಿದೆ ಎಂದು ಮೊಮ್ಮಕ್ಕಳಾದ ರಾಘವೇಂದ್ರ, ಶೇಖರ ಗೌಡ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Verified by MonsterInsights