ಚಿತ್ರದುರ್ಗ: ಕೋಟೆನಾಡಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ವಿರುದ್ಧ ಭ್ರಷ್ಠಾಚಾರ ನಿರ್ಮೂಲನ ಸಮಿತಿ ಹಾಗೂ ಮಾದಿಗ ಹೋರಾಟ ಸಮಿತಿ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯ ವೇಳೆ, ದಲಿತ ಸುಮದಾಯಕ್ಕೆ ಬಿಜೆಪಿ ಹಾಗೂ ಸಮಾಜ ಕಲ್ಯಾಣ ಸಚಿವರಿಂದ ಅನ್ಯಾಯವಾಗಿದೆ ಎಂದು ಗೋವಿಂದ ಕಾರಜೋಳ ವಿರುದ್ದ ಮುಗಿ ಬಿದ್ದಿದ್ದಾರೆ.

ಈ ವೇಳೆ ಮಾತಾನಾಡಿದ ಗೋವಿಂದ ಕಾರಜೋಳ , ದಲಿತ ಮುಖಂಡರಿಗೆ ಹೊರ ಹೋಗುವಂತೆ ಅವಾಜ್ ಹಾಕಿ,ಗೂಂಡಾಗಿರಿ ಮಾಡುತ್ತಿದ್ದೀರಾ ಎಂದು ಮುಖಂಡರಿಗೆ ಕೂಗಾಡಿ, ನನ್ನ ವಿರುದ್ದ ಘೋಷಣೆ ಕೂಗಿದವರು ಗೂಂಡಾಗಳೆಂದು ಹೇಳಿದ್ದಾರೆ.
ಸಭೆ ನಡುವೆ ಸಚಿವರ ಹಾಗೂ ದಲಿತ ನಾಯಕರ ನಡುವೆ ತೀವ್ರ ಮಾತಿನ ಚಕಮಕಿ ನಡಿದಿದೆ.

ಕಾರಣ,
ಈ ಹಿಂದೆ ಗೋವಿಂದ ಕಾರಜೋಳ ಸಚಿವರಾಗಿದ್ದಾಗ ದಲಿತರಿಗೆ ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ ಹಾಗೂ ಅನೇಕ ಯೋಜನೆಯ ಅನುದಾನ ಬಿಡುಗಡೆ ಮಾಡಿಲ್ಲವೆಂದು ಆಕ್ರೋಶ ಹೊರ ಹಾಕಿದ್ದಾರೆ.


