ದೇಶ/ವಿದೇಶರಾಜಕೀಯಸುದ್ದಿ

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ನಮ್ಮ ಸರ್ಕಾರ ಪರದಾಡುತ್ತಿದೆ; ತೆಲಂಗಾಣ ಸಿಎಂ ರೇವಂತ್ ರೆಡ್ಡಿ

ಕರ್ನಾಟಕ ಕಾಂಗ್ರೆಸ್​ ಮಾದರಿಯಲ್ಲೇ ಚುನಾವಣೆಗೆ ಮುನ್ನ ಗ್ಯಾರಂಟಿ ಯೋಜನೆ ಘೋಷಿಸಿ, ತೆಲಂಗಾಣದಲ್ಲಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕಕ್ಕೆ ಬಂದಿತ್ತು. ಇದೀಗ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಪರದಾಡುತ್ತಿದೆ.

ಈ ಕುರಿತು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, ನಾವು ಈಗಾಗಲೇ 7 ಲಕ್ಷ ಕೋಟಿ ಸಾಲದಲ್ಲಿ ಮುಳುಗಿದ್ದೇವೆ. ಇದು ನಾನು ಸಿಎಂ ಸ್ಥಾನದಲ್ಲಿ ಕುಳಿತ ಮೇಲೆ ಇದೆಲ್ಲಾ ಗೊತ್ತಾಯ್ತು ಎಂದು ರೇವಂತ್​ ರೆಡ್ಡಿ ಹೇಳಿದ್ದಾರೆ. ಮುಂದುವರೆದು ಮಾತನಾಡಿರುವ ರೇವಂತ್ ರೆಡ್ಡಿ, ಸಾಲ ಮಾಡಿ ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡುತ್ತಿದ್ದೇವೆ. ರೇಸ್​ನಲ್ಲಿ ಇಳಿದ ಮೇಲೆ ಈ ರೀತಿ ಮಾಡುವುದು ಅನಿವಾರ್ಯ. ಈ ಹಿಂದಿನ ಸಿಎಂ ಕೆ.ಸಿ. ಚಂದ್ರಶೇಖರಾವ್​ 6.5 ಲಕ್ಷ ಕೋಟಿ ರೂಪಾಯಿ ಸಾಲವನ್ನು ನಮ್ಮ ನೆತ್ತಿಯ ಮೇಲೆ ಹಾಕಿ ಹೋಗಿದ್ದರು. ಸದ್ಯ ತೆಲಂಗಾಣ ಸರ್ಕಾರ 7 ಲಕ್ಷ ಕೋಟಿ ರೂಪಾಯಿ ಸಾಲದಲ್ಲಿ ಮುಳುಗಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ರೇಸ್​ನಲ್ಲಿ ಇಳಿದ ಮೇಲೆ ಏನಾದರೂ ಮಾಡಲೇಬೇಕು ಅಲ್ವಾ, ಈಗ ರೇಸ್ ನಡೆಯುತ್ತಿದೆ. ಏನಾದ್ರು  ಮಾಡುತ್ತೇವೆ. ಸ್ಪೀಡ್​ ಥ್ರಿಲ್ಸ್​ ಬಟ್ ಕಿಲ್ಸ್ ಅಂತ ಗಾದೆಯೇ ಇದೆಯಲ್ಲಾ ಎಂದು ರೇವಂತ್ ರೆಡ್ಡಿ ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಅಸಹಾಯಕತೆ ತೋಡಿಕೊಂಡಿದ್ದಾರೆ.

Comments (0)

Your email address will not be published. Required fields are marked *

Back to top button