ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಗೇಮ್ ಚೇಂಜರ್‌ನ ಪೂರ್ವ ಬಿಡುಗಡೆ ಕಾರ್ಯಕ್ರಮವು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆಯಿತು. ಶಂಕರ್ ನಿರ್ದೇಶನದ ಈ ಸಿನಿಮಾ ಇದೇ ತಿಂಗಳ 10ರಂದು ತೆರೆಗೆ ಬರಲಿದೆ.ಸಿನಿಮಾ ಪ್ರೀ ರಿಲೀಸ್ ಇವೆಂಟ್ಗೆ ಮುಖ್ಯ ಅತಿಥಿಯಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಉಪಸ್ಥಿತಿಯಿಂದಾಗಿ ಗಮನ ಸೆಳೆಯಿತು.
ಈ ವೇಳೆ ಮಾತನಾಡಿದ ಪವನ್ ಕಲ್ಯಾಣ್, ತಮ್ಮ ಹಾಗೂ ರಾಮ್ ಚರಣ್ ಅವರ ಸಾಧನೆಗೆ ಮೆಗಾಸ್ಟಾರ್ ಚಿರಂಜೀವಿಯೇ ಕಾರಣ ಎಂದು ಹೇಳಿದ್ದಾರೆ. “ನಾನೇ ಆಗಿರಲಿ, ರಾಮ್ ಚರಣ್ ಆಗಿರಲಿ ಅಥವಾ ಬೇರೆ ಯಾರೇ ಆಗಿರಲಿ, ಎಲ್ಲದಕ್ಕೂ ಮೂಲ ಚಿರಂಜೀವಿ ಕಾರಣ.
ಚಿರಂಜೀವಿ ಪಟ್ಟ ಕಷ್ಟಗಳನ್ನು ನೆನಪು ಮಾಡಿಕೊಂಡು ಭಾವುಕರಾದ ಪವನ್ ಕಲ್ಯಾಣ್, ‘ನಮ್ಮ ಅಣ್ಣ ಬಹಳ ಕಷ್ಟಪಟ್ಟು ಶ್ರಮಪಟ್ಟು ಅವರು ಬೆಳೆದು ನಮಗೆಲ್ಲ ಆಸರೆಯಾದರು. ಆ ದಿನಗಳಲ್ಲಿ ನನಗೆ ನೆನಪಿದೆ, ಅವರು ಬಹಳ ತಡವಾಗಿ ಮನೆಗೆ ಬರುತ್ತಿದ್ದರು. ಅವರು ಧರಿಸಿದ್ದ ಶೂ ಸಹ ತೆಗೆದುಕೊಳ್ಳಲು ಆಗದಷ್ಟು ಸುಸ್ತಾಗಿರುತ್ತಿದ್ದರು. ನಾನು ಅವರ ಶೂ ತೆಗೆದರೆ ಕಾಲೆಲ್ಲ ಊದಿಕೊಂಡಿರುತ್ತಿತ್ತು. ಅಷ್ಟು ಕಷ್ಟುಪಟ್ಟು ಅವರು ಆಗ ಕೆಲಸಮಾಡಿದವರು. ಅವರನ್ನು ನೋಡಿ ನನ್ನ ಬಗ್ಗೆ ನನಗೆ ನಾಚಿಕೆ ಅನಿಸುತ್ತಿತ್ತು’ ಎಂದಿದ್ದಾರೆ.