Wednesday, April 30, 2025
24 C
Bengaluru
LIVE
ಮನೆ#Exclusive Newsಸ್ಯಾಂಡಲ್ ವುಡ್ ಕಪ್-2024 ಬ್ಯಾಡ್ಮಿಂಟನ್ ಗೆ ತೆರೆ..ರಣಧೀರ ರೈಡರ್ಸ್ ತಂಡಕ್ಕೆ ಒಲಿದ ವಿಜಯಮಾಲೆ..ಅಪ್ಪು ಪ್ಯಾಂಥರ್ಸ್ ತಂಡ...

ಸ್ಯಾಂಡಲ್ ವುಡ್ ಕಪ್-2024 ಬ್ಯಾಡ್ಮಿಂಟನ್ ಗೆ ತೆರೆ..ರಣಧೀರ ರೈಡರ್ಸ್ ತಂಡಕ್ಕೆ ಒಲಿದ ವಿಜಯಮಾಲೆ..ಅಪ್ಪು ಪ್ಯಾಂಥರ್ಸ್ ತಂಡ ರನ್ನರ್

ಸ್ಯಾಂಡಲ್ ವುಡ್ ಕಪ್-2024 ಬ್ಯಾಡ್ಮಿಂಟನ್ ಟೂರ್ನಮೆಂಟ್ ಗೆ ತೆರೆಬಿದ್ದಿದೆ. ಸೆಪ್ಟೆಂಬರ್ 28-29ರಂದು ಕೋರಮಂಗಲದ ಇನ್ ಡೋರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಾವಳಿಯಲ್ಲಿ ಮನುರಂಜನ್ ನಾಯಕತ್ವದ ರಣಧೀರ ರೈಡರ್ಸ್ ತಂಡ ಕಪ್ ಗೆದ್ದಿದ್ದು, ಸೃಜನ್ ನಾಯಕತ್ವದ ಅಪ್ಪು ಪ್ಯಾಂಥರ್ಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಸ್ಯಾಂಡಲ್ ವುಡ್ ಕಲಾವಿದರು, ತಂತ್ರಜ್ಞನರು, ಮಾಧ್ಯಮದವರು ಭಾಗಿಯಾಗಿ ಪಂದ್ಯಾವಳಿಯನ್ನು ಮತ್ತಷ್ಟು ರಂಗುಗೊಳಿಸಿದರು.

ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಅಪ್ಪು ಪ್ಯಾಂಥರ್ಸ್ ನ ಮಂಜಯ್ಯ, ಪ್ರವೀಣ ಪ್ಲೇಯರ್ಸ್ ಆಫ್ ದಿ ಮ್ಯಾಚ್ ಪಡೆದುಕೊಂಡರೆ, ರಣಧೀರ ರೈಡರ್ಸ್ ತಂಡ ಮನುರಂಜನ್-ಪ್ರವೀಣ್ ಶ್ರೇಷ್ಠ ಮೆನ್ಸ್ ಡಬಲ್ಸ್ ತಂಡವಾಗಿ ಹೊರಹೊಮ್ಮಿದೆ. ಶ್ರೇಷ್ಠ ವುಮೆನ್ಸ್ ಡಬಲ್ಸ್ ಆಗಿ ಅಪ್ಪು ಪ್ಯಾಂಥರ್ಸ್ ವಾಣಿಶ್ರೀ-ನಯನ, ಶ್ರೇಷ್ಠ ಮಿಕ್ಸ್ ಡ್ ಡಬಲ್ಸ್ ರಣಧೀರ ರೈರಡ್ಸ್ ನ ಕಾರ್ತಿಕ್-ಪ್ರವೀಣ ಸಿಕ್ಕಿದೆ. ಶ್ರೇಷ್ಠ ಕ್ಯಾಪ್ಟನ್ ಪಟ್ಟ ಅಮೃತವರ್ಷಿಣಿ ಅವೆಂಜರ್ಸ್ ನ ವಿಕ್ರಮ್ ರವಿಚಂದ್ರನ್ ಪಡೆದುಕೊಂಡರೆ, ರಣಧೀರ ರೈಡರ್ಸ್ ನ ಮಂಜು, ಸನೀಲ್, ಸ್ಪರ್ಶ ಶ್ರೇಷ್ಠ ಟ್ರಯೋ ಆಗಿ ಹೊರಹೊಮ್ಮಿದ್ದಾರೆ.

ಸ್ಯಾಂಡಲ್ ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಕೇವಲ ಮನರಂಜನೆ ಉದ್ದೇಶದಿಂದ ಶುರು ಮಾಡಿರುವುದಲ್ಲ. ಬದಲಾಗಿ ಒಂದೊಳ್ಳೆ ಕಾರ್ಯ ಇಟ್ಟುಕೊಂಡು ಈ ಕಪ್ ಪ್ರಾರಂಭಿಸಲಾಗಿದೆ. ಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು , ವಿತರಕರು, ನಿರ್ಮಾಪಕರು ಕಷ್ಟದಲ್ಲಿರುವ ಸಹಾಯ ಮಾಡುವುದು ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಪ್ರಮುಖ ಧ್ಯೇಯವಾಗಿದೆ.

ಹಿರಿಯ ನಿರ್ಮಾಪಕರಾದ ಸಾ.ರಾ ಗೋವಿಂದ್, ಭಾ.ಮಾ ಹರೀಶ್, ಭಾ.ಮಾ.ಗಿರೀಶ್, ಎನ್ .ಎಂ. ಸುರೇಶ್, ಎ ಗಣೇಶ್, ಪ್ರಮೀಳಾ ಜೋಷಾಯ್, ಸುಂದರ್ ರಾಜ್, ಪ್ರವೀಣ್

 

 

ಕುಮಾರ್, ಜಯಸಿಂಹ ಮೂಸರಿ ನೇತೃತ್ವದಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆದಿದೆ. ಇವರೆಲ್ಲರು ಇಡೀ ಇಂಡಸ್ಟ್ರೀಯಲ್ಲಿ ಒಗ್ಗೂಡಿಸುವ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಯಾಂಡಲ್ ವುಡ್ ಕಪ್-2024 ಬ್ಯಾಡ್ಮಿಂಟನ್ ಟೂರ್ನಮೆಂಟ್ ಸಮಾರೋಪ ಸಮಾರಂಭಕ್ಕೂ ಮೊದಲ ಗುರುಕಿರಣ್ ಅವರ ಸಂಗೀತ ಕಾರ್ಯಕ್ರಮ ನಡೆಯಿತು. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರು ಸಂಗೀತ ಸುಧೆ ಹರಿಸಿದ್ದು, ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ತಂಡಗಳು ಹಾಗೂ ತಂಡದ ನಾಯಕರು

1) ಅಜಯ್ ರಾವ್ – ಗಂಧದಗುಡಿ ಗ್ಯಾಂಗ್

2) ಮನುರಂಜನ್- ರಣಧೀರ ರೈಡರ್ಸ್ಸ್

3) ಚೇತನ್ ಚಂದ್ರ -ಬುದ್ಧಿವಂತ ಬ್ಲಾಸ್ಟರ್ಸ್

4) ವಸಿಷ್ಠ ಸಿಂಹ- ಅಂತ ಹಂಟರ್ಸ್ಸ್

5) ವಿಕ್ರಮ್ ರವಿಚಂದ್ರನ್ – ಅಮೃತವರ್ಷಿಣಿ ಅವೆಂಜರ್ಸ್ಸ್

6) ಮಯೂರ್ ಪಟೇಲ್ -ಟೈಗರ್ ಟೈಟಾನ್ಸ್

7) ಶ್ರೀನಗರ ಕಿಟ್ಟಿ- ಸೂರ್ಯವಂಶ ಸ್ವ್ಯಾಡ್

8) ಪೃಥ್ವಿ ಅಂಬಾರ್- ಸಾಂಗ್ಲಿಯಾನ ಸ್ಮ್ಯಾಷರ್ಸ್ಸ್

9) ಪ್ರಮೋದ್ ಶೆಟ್ಟಿ – ಓಂ ವಾರಿಯರ್ಸ್ಸ್

10 ಸೃಜನ್ ಲೋಕೇಶ್ – ಅಪ್ಪು ಫ್ಯಾಂಥರ್ಸ್ಸ್

ಉಪನಾಯಕರು

ಸಿಂಧು ಲೋಕನಾಥ್- ಗಂಧದಗುಡಿ ಗ್ಯಾಂಗ್

ಶೃತಿ ಹರಿಹರನ್- ರಣಧೀರ ರೈಡರ್ಸ್ಸ್

ಜಾಹ್ನವಿ- ಬುದ್ಧಿವಂತ ಬ್ಲಾಸ್ಟರ್ಸ್

ದಿವ್ಯಾ ಸುರೇಶ್- ಅಂತ ಹಂಟರ್ಸ್ಸ್

ಸಂಜನಾ ಗಲ್ರಾನಿ -ಟೈಗರ್ ಟೈಟಾನ್ಸ್

ತನಿಷಾ ಕುಪ್ಪಂಡ- ಸೂರ್ಯವಂಶ ಸ್ವ್ಯಾಡ್

ಶ್ಯಾವ್ಯಾ ಶೆಟ್ಟಿ – ಸಾಂಗ್ಲಿಯಾನ ಸ್ಮ್ಯಾಷರ್ಸ್ಸ್

ಸುಕೃತಾ ವಾಗ್ಲೆ – ಓಂ ವಾರಿಯರ್ಸ್ಸ್

ಮೇಘನಾ ರಾಜ್ – ಅಪ್ಪು ಫ್ಯಾಂಥರ್ಸ್ಸ್

 

ಮೆಂಟರ್ಸ್ ಪಟ್ಟಿ

ಜೋಗಿ- ಗಂಧದಗುಡಿ ಗ್ಯಾಂಗ್

ರಂಗನಾಥ್ ಭಾರದ್ವಾಜ್- ರಣಧೀರ ರೈಡರ್ಸ್ಸ್

ಸದಾಶಿವ ಶೆಣೈ- ಬುದ್ಧಿವಂತ ಬ್ಲಾಸ್ಟರ್ಸ್

ಯಮುನಾ ಶ್ರೀನಿಧಿ- ಅಂತ ಹಂಟರ್ಸ್ಸ್

ಕವಿತಾ ಲಂಕೇಶ್-ಅಮೃತವರ್ಷಿಣಿ ಅವೆಂಜರ್ಸ್ಸ್

ಆರೂರು ಜಗದೀಶ್ -ಟೈಗರ್ ಟೈಟಾನ್ಸ್

ಟಿ.ಪಿ.ಸಿದ್ದರಾಜು- ಸೂರ್ಯವಂಶ ಸ್ವ್ಯಾಡ್

ತಾರಾ ಅನುರಾಧಾ- ಸಾಂಗ್ಲಿಯಾನ ಸ್ಮ್ಯಾಷರ್ಸ್ಸ್

ರಾಜೇಶ್ ರಾಮನಾಥ್ – ಓಂ ವಾರಿಯರ್ಸ್ಸ್

ಇಂದ್ರಜಿತ್ ಲಂಕೇಶ್ – ಅಪ್ಪು ಫ್ಯಾಂಥರ್ಸ್ಸ್

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments