ಮುಡಾದಲ್ಲಿ ಬಗೆದಷ್ಟು ಬಯಲಿಗೆ ಬರುತ್ತಿವೆ ಒಂದೊಂದು ಭ್ರಷ್ಟಾಚಾರದ ಆರೋಪಗಳು. ಸದ್ಯ ಮುಡಾದ ಅಧಿಕಾರಿಗಳ ಹಣದಾಸೆ ಎಲ್ಲ ಬಗೆಯ ಸೀಮೆಯನ್ನು ಮೀರಿಕೊಂಡು ಹೊಗುತ್ತಿವೆಯಾ ಅನ್ನು ಅನುಮಾನಗಳು ಮೂಡುತ್ತಿವೆ. 2016ರಲ್ಲಿ ಮೃತಪಟ್ಟ ವ್ಯಕ್ತಿಯ ಮೇಲೆ 2023ರಲ್ಲಿ ಬದುಕಿದ್ದಾರೆ ಎಂದು ದಾಖಲೆ ಸೃಷ್ಟಿ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ ಆರೋಪವೊಂದು ಕೇಳಿ ಬರುತ್ತಿದೆ.
ಎಸಿ ಕಚೇರಿಯಲ್ಲಿ ಇತ್ಯರ್ಥವಾಗಿದ್ದ ಆದೇಶ ತಿರುಚಿ ಹೊಸ ಆದೇಶ ನೀಡಲಾಗಿದೆ. ತಹಶೀಲ್ದಾರ್ ನವೀನ್ ಜೊಸೆಫ್ ನೀಡಿದ್ದ ವರದಿ ಬಚ್ಚಿಟ್ಟು ಹಿಂದಿನ ತಹಶೀಲ್ದಾರ್ ಗಿರೀಶ್ ನೀಡಿದ ಸುಳ್ಳು ದಾಖಲೆ ಪಡೆದು ಮುಡಾ ಅಧಿಕಾರಿಗಳು 11 ಸೈಟ್ ಡೀಲ್ ಮಾಡಿದ್ದಾರೆ ಎಂಬ ದೊಡ್ಡ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಮೂಲ ಮಾಲೀಕನನ್ನು ಬಿಟ್ಟು ನಕಲಿ ವ್ಯಕ್ತಿಗೆ 11ಸೈಟ್ ಹಂಚಿಕೆಯಾಗಿವೆ. 2016ರಲ್ಲಿ ಮೃತಪಟ್ಟಿರುವ ಕ್ಯಾತಮಾರನಹಳ್ಳಿಯ ಶಿವಚಿಕ್ಕಯ್ಯ 2023ರಂದು ತಹಶೀಲ್ದಾರ್ ಕೋರ್ಟ್ನಲ್ಲಿ ಹಾಜರಾಗಿದ್ದರು ಎಂದು ದಾಖಲೆ ಸೃಷ್ಟಿಯಾಗಿದೆ. ಹಿಂದಿನ ತಹಶೀಲ್ದಾರ್ ಬಿ.ಎನ್.ಗಿರೀಶ್ ಸಮ್ಮುಖದಲ್ಲಿ ನ್ಯಾಯ ತೀರ್ಮಾನವಾಗಿದ್ದು, ಮೂಲ ಜಮೀನು ಮಾಲೀಕ ಶಿವಚಿಕ್ಕಯ್ಯ ಈ ವೇಳೆ ಕೋರ್ಟ್ಗೆ ಹಾಜರಾಗಿದ್ದರೂ ಎಂದು ದಾಖಲೆಯನ್ನು ಸೃಷ್ಟಿ ಮಾಡಲಾಗಿದೆ.
ಈ ಬಗ್ಗೆ ದಾಖಲೆ ನೀಡುವಂತೆ ಶಿವಚಿಕ್ಕಯ್ಯ ಮಕ್ಕಳಿಂದ ಅರ್ಜಿ ಸಲ್ಲಿಸದರೂ ಕೂಡ ಇಲ್ಲಿಯವರೆಗೆ ಯಾವುದೇ ಉತ್ತರವನ್ನು ಮುಡಾ ಅಧಿಕಾರಿಗಳಿಂದ ಬಂದಿಲ್ಲ. ಕ್ಯಾತಮಾರನಹಳ್ಳಿ ಸರ್ವೆ ನಂಬರ್ 155ರಲ್ಲಿ 4 ಎಕರೆ 36 ಗುಂಟೆ ಜಾಗವನ್ನು ದಾಖಲೆಯ ಪ್ರಕಾರ ಶಿವಚಿಕ್ಕಯ್ಯ ಹೊಂದಿದ್ದಾರೆ. ಆ ಪೈಕಿ 2.19 ಎಕರೆ ಭೂಸ್ವಾಧೀನ ಪಡಿಸಿ ಪರಿಹಾರ ನೀಡಲಾಗಿರುವ ಹಾಗೂ 1.30 ಲಕ್ಷ ಪರಿಹಾರ ಹಾಗೂ 3 ಸೈಟ್ ಮುಡಾ ನೀಡಿದೆಯೆಂದು ಕೂಡ ದಾಖಲೆಯಲ್ಲಿ ಹೇಳಲಾಗಿದೆ. ಉಳಿದ 2.19 ಗುಂಟೆ ಜಮೀನು ಇನ್ನೂ ಕೂಡ ಶಿವಚಿಕ್ಕಯ್ಯ ಅವರ ಹೆಸರಿನಲ್ಲಿಯೇ ಇದ್ದು. ಉಳಿಕೆ ಜಮೀನಿಗೆ ಕೆ.ಚಂದ್ರು ಮಾಲೀಕ ಎಂದು ದಾಖಲೆ ಸೃಷ್ಟಿ ಮಾಡಿರುವ ಆರೋಪ ಕೇಳಿ ಬಂದಿದೆ. ಅದು ಮಾತ್ರವಲ್ಲ ನಕಲಿ ಕೆ.ಚಂದ್ರುವಿಗೆ 50:50 ಅನುಪಾತದಲ್ಲಿ 11 ಸೈಟ್ ಹಂಚಿಕೆ ಕೂಡ ಆಗಿವೆ. ವಿಜಯನಗರದಲ್ಲಿ ಅರ್ಜಿ ಹಾಕಿದ ನಾಲ್ಕೇ ದಿನಕ್ಕೆ ಸೈಟ್ ಹಂಚಿಕೆಯಾಗಿದೆ.