ಜಿಲ್ಲೆವೈರಲ್ ನ್ಯೂಸ್ಸುದ್ದಿ
ಈ ರಸ್ತೆಯಲ್ಲಿ ಆನೆಯೇ ಚೆಕ್ಕಿಂಗ್ ಆಫೀಸರ್ ಪ್ರತಿ ವಾಹನವನ್ನು ತಪಾಸಣೆ ನಡೆಸುವ ಸಲಗ

ತಮಿಳುನಾಡು : ಕಾಡಿನ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಅಥವಾ ಪೊಲೀಸರು ತಪಾಸಣೆ ನಡೆಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಸಲಗ ಎಲ್ಲಾ ವಾಹನ ಚೆಕ್ ಮಾಡುವ ದೃಶ್ಯ ಅಚ್ಚರಿ ತರಿಸುತ್ತದೆ.

ಕರ್ನಾಟಕದ ಗಡಿಭಾಗದಲ್ಲಿರುವ ತಮಿಳುನಾಡಿನ ಗೇರುಮಾಳ ರಸ್ತೆಯಲ್ಲಿ ಒಂಟಿ ಸಲಗ ಚೆಕ್ಕಿಂಗ್ ಆಫೀಸರ್ ನಂತೆ ಪಿಕ್ ಅಪ್ ವಾಹನ, ಲಾರಿ, ಬಸ್ ನ್ನೂ ಬಿಡದ ತಪಾಸಣೆ ಮಾಡುತ್ತದೆ.

ಅಂದ ಹಾಗೆ ಈ ಆನೆ ಕಬ್ಬು, ತರಕಾರಿ ಇತರೆ ಆಹಾರ ಪದಾರ್ಥಕ್ಕೆ ತಡಕಾಡುವ ದೃಶ್ಯ ಕಂಡು ವಾಹನ ಚಾಲಕರು ಗಲಿಬಿಲಿಗೊಳಗಾದ ಪರಿಣಾಮ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.




