Thursday, January 29, 2026
16.9 C
Bengaluru
Google search engine
LIVE
ಮನೆಜಿಲ್ಲೆಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಟಾಪನೆ ದಿನವೆ ಶಿಡ್ಲಘಟ್ಟದ ಶಾಲೆಯಲ್ಲಿ ನೂರಾರು ಬಾಲ ರಾಮರ ಸಂಭ್ರಮ

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಟಾಪನೆ ದಿನವೆ ಶಿಡ್ಲಘಟ್ಟದ ಶಾಲೆಯಲ್ಲಿ ನೂರಾರು ಬಾಲ ರಾಮರ ಸಂಭ್ರಮ

ವರದಿ: ಚಂದ್ರಶೇಖರ್ , ಶಿಡ್ಲಘಟ್ಟ 

ಚಿಕ್ಕಬಳ್ಳಾಪುರ :  ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಟಾಪನೆ ಸಡಗರ ಸಂಭ್ರಮಗಳಿಂದ ಅದ್ದೂರಿಯಾಗಿ ನಡೆದ್ರೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ನೂರಾರು ಬಾಲ ರಾಮರು ಇವತ್ತು ವೇದಿಕೆ ಹತ್ತಿ ಸಂಭ್ರಮ ಹಂಚಿಕೊಂಡ್ರು.

ಸೀಕಲ್ ರಾಮಚಂದ್ರಗೌಡ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸುವುದಲ್ಲದೆ, ಮಕ್ಕಳಿಗೆ ಬಾಲ ರಾಮನ ವೇಶ ತೊಡಿಸಿ ತಾವೂ ಕೂಡ ಸಂಭ್ರಮದಿಂದ ಭಾಗವಹಿಸಿದ್ರು. ಶಿಡ್ಲಘಟ್ಟ ನಗರದ ವಾಸವಿ ವಿಧ್ಯಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಅಯೋಧ್ಯಾ ರಾಮನ ಸಂಭ್ರಮ ಸಡಗರ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ವೇಷ ಭೂಷಣ ತೊಟ್ಟು ಸಂಭ್ರಮಿಸಿದ್ರು. ರಾಮ, ಲಕ್ಷ್ಮಣ, ಸೀತೆ, ಜಾಬವಂತ, ಶಬರಿ, ದಶರಥ, ಕೈಕೇಯಿ ಹೀಗೆ ಹತ್ತಾರು ಪಾತ್ರಗಳು ವಿಶೇಷ ಉಡುಗೆಯಲ್ಲಿ ಛದ್ಮವೇಷದಾರಿಗಳಾಗಿ ಆಗಮಿಸಿದ್ರು.

ಮೂರು ದಿನಗಳ ತಯಾರಿಯಲ್ಲಿ ಯಶಸ್ವೀ ಕಾರ್ಯಕ್ರಮ ನಡೆಸಿಕೊಟ್ಟ ರಾಮಚಂದ್ರಗೌಡ ರಾಮ ಎನ್ನುವುದು ಧರ್ಮದ ಪ್ರತೀಕ, ಹನುಮ ಎನ್ನುವುದು ಭಕ್ತಿಯ ಪ್ರತೀಕ ಇವತ್ತು ನರೇಂದ್ರ ಮೋದಿ ಎರಡೂ ಭಾವಗಳನ್ನು ವಿಶ್ವಕ್ಕೆ ಮತ್ತೊಮ್ಮೆ ಪರಿಚಯ ಮಾಡಿಕೊಡ್ತಿದ್ದಾರೆ. ಮುಂದಿನ ಪೀಳಿಗೆಗೆ ರಾಮನ ಆದರ್ಶಗಳು ಬದುಕುಳಿಯಬೇಕಾದ್ರೆ ರಾಮ ಮತ್ತೆ ನಮ್ಮೆಲ್ಲರ ಮುಂದೆ ಪ್ರತ್ಯಕ್ಷವಾಗಬೇಕು.

ಇಂತಹ ಮಹಾ ಸನ್ನಿವೇಶ ಇವತ್ತು ಅಯೋಧ್ಯೆಯಲ್ಲಿ ಮೋದಿ ಇಚ್ಚೆಯಂತೆ ನೆರವೇರ್ತಿದೆ ಅಂದ್ರು. ಸುಮಾರು ಮುನ್ನೂರಕ್ಕೂ ಹೆಚ್ಚು ಮಕ್ಕಳು ಛದ್ಮವೇಷದಾರಿಗಳಾಗಿ ಭಾಗವಹಿಸಿದ್ರು, ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ರು. ವೇದಿಕೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಲಾಗಿತ್ತು. ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ವಿತರಿಸಲಾಯಿತು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments