ಬೆಂಗಳೂರು : ಬಿಗ್ಬಾಸ್ ಸೀಸನ್10ರ ಆಟ ನೋಡ ನೋಡುತ್ತಿದ್ದಂತೆ ಫಿನಾಲೆಯ ಅಂತಿಮ ಘಟಕ್ಕೆ ಬಂದು ತಳುಪಿದೆ. ಈಗ ಬಿಗ್ಬಾಸ್ ಮನೆಯಲ್ಲಿ ಸಡಗರ ಸಂಭ್ರಮ ಹೆಚ್ಚಾಗಿದೆ. ಕಾರಣ ಬಿಗ್ಬಾಸ್ ಸೀಸನ್10 ರಿಂದ ಎಲಿಮಿನೇಟ್ ಆದ ಕಂಟೆಸ್ಟೆಂಟ್ಸ್ಗಳು ಎಲ್ಲರೂ ಕೂಡ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ಬಾಸ್ ಹೌಸ್ಗೆ ಎಲಿಮಿನೇಟ್ ಆದ ಸ್ಪರ್ಧಿಗಳು ಮನೆಯೊಳಗೆ ಬಂದಿದ್ದಾರೆ. ಬಂದವರು ಇವತ್ತು ಮನೆಯಲ್ಲೇ ತಂಗಲಿದ್ದಾರೆ. ಮನೆ ಈಗ ಮೊದಲಿನಂತೆ ತುಂಬು ಕುಟುಂಬದ ರೀತಿ ಪರಿವರ್ತನೆ ಆಗಿದೆ. ಎಲಿಮಿನೇಟೆಡ್ ಆದ ಎಲ್ಲವನ್ನು ನೇರ ನೇರವಾಗಿ ಚರ್ಚೆ ಮಾಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ರಿಲೀಸ್ ಆದ ಪ್ರೋಮೋದಲ್ಲಿ ನಿಮಗಾಗಿ ಒಂದು ಸರ್ಪ್ರೈಸ್ ಕಾದಿದೆ ಎಂದು ಬಿಗ್ಬಾಸ್ ಹೇಳುತ್ತಾರೆ.
ಆಗ ಮನೆಯಲ್ಲಿದ್ದ ಸ್ಪರ್ಧಿಗಳು ಗಾರ್ಡನ್ ಏರಿಯಾಗೆ ಬಂದು ಗಿಪ್ಟ್ಗಳನ್ನು ಕಂಡು ಖುಷಿ ಪಡುತ್ತಾರೆ. ಆಗ ಅಚ್ಚರಿಯ ರೀತಿಯಲ್ಲಿ ಆ ಗಿಪ್ಟ್ ಬಾಕ್ಸ್ ಅನ್ನು ಓಪನ್ ಮಾಡುತ್ತಿದ್ದಂತೆ ಎಲ್ಲ ಸ್ಪರ್ಧಿಗಳು ಬೆಚ್ಚಿ ಬಿಳುತ್ತಾರೆ. ಆಗ ಆ ಉಡುಗೊರೆ ಬಾಕ್ಸ್ನಲ್ಲಿ ರ್ಯಾಪರ್ ಇಶಾನಿ ಇರುತ್ತಾರೆ. ಹೀಗೆ ಒಬ್ಬೊಬ್ಬರಾಗಿ ಬಿಗ್ಬಾಸ್ನಿಂದ ಎಲಿಮಿನೇಟ್ ಆದ ಸ್ಪರ್ಧಿಗಳು ಮನೆಗೆ ಬಂದಿದ್ದಾರೆ. ಒಟ್ಟಿನಲ್ಲಿ ಈ ವಾರ ಎಲ್ಲವೂ ಸರ್ಪ್ರೈಸಿಂಗ್ ಆಗಿ ಇರಲಿದ್ದು ಮನೆ ತುಂಬಿ ತುಳಕಲಿದೆ. ವಾರದ ಮಧ್ಯೆ ಇದೇ ಸರ್ಪ್ರೈಸ್ ನಲ್ಲೇ ಎಲಿಮಿನೇಷನ್ ಕೂಡ ನಡೆಯೋ ಸಾಧ್ಯತೆ ಇದೆ.