ಕಲಬುರಗಿ: ಜಿಲ್ಲೆಯ ಅಧಿಕಾರಿಗಳು ಮಾತು ಕೇಳುತ್ತಿಲ್ಲ. ಕೊಬ್ಬು ಜಾಸ್ತಿಯಾಗಿದೆ, ಚಳಿ ಬಿಡಿಸಬೇಕಾಗಿದೆ. ಇಲ್ಲದೆ ಹೋದರೆ ನಮ್ಮ ಮಾತು ಕೇಳುವುದಿಲ್ಲ ಎಂದು ಆಳಂದ ಶಾಸಕ ಹಾಗೂ ಸಿಎಂ ಸಲಹೆಗಾರ ಬಿ.ಆರ್.ಪಾಟೀಲ್ ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದರು.ನಗರದಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಅವರು, ಯಾವ ಅಧಿಕಾರಿಯೂ ನಮ್ಮ ಮಾತು ಕೇಳುತ್ತಿಲ್ಲ. ಜನರ ಸಮಸ್ಯೆಗಳಿಗೂ ಸ್ಪಂಧಿಸುತ್ತಿಲ್ಲ. ಮೂಲಭೂತಗಳಿಗಾಗಿ ಜನರು ಪರದಾಡುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಪಾಲಿಕೆ ಕಮಿಷನರ್ ಸೇರಿದಂತೆ ಯಾವ ಅಧಿಕಾರಿ ಈ ಸಮಸ್ಯೆ ಕುರಿತು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳಿಗೆ ಕೊಬ್ಬು ಮಾತೇ ಕೇಳುತ್ತಿಲ್ಲ:ಬಿ.ಆರ್.ಪಾಟೀಲ್
RELATED ARTICLES