Wednesday, April 30, 2025
30.3 C
Bengaluru
LIVE
ಮನೆUncategorizedಭೀಕರ ಬರಗಾಲದಲ್ಲೂ ಹಾಲು ಉತ್ಪಾದನೆ: ಕೆಎಂಎಫ್ ನಂಬರ್ ಒನ್

ಭೀಕರ ಬರಗಾಲದಲ್ಲೂ ಹಾಲು ಉತ್ಪಾದನೆ: ಕೆಎಂಎಫ್ ನಂಬರ್ ಒನ್

ಬೆಂಗಳೂರು : ರಾಜ್ಯದಲ್ಲಿ ಭೀಕರ ಬರಗಾಲದ ಮಧ್ಯೆಯೂ ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ನಂಬರ್ ಒನ್‌ ಆಗಿ ಹೊರಹೊಮ್ಮಿದೆ. ಈ ಮೂಲಕ ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು ಸ್ಥಾಪಿಸಿದೆ.

ಬರದ ನಡುವೆಯೂ ರಾಜ್ಯದಲ್ಲಿ ಹಾಲಿನ ಹೊಳೆಯೇ ಹರಿದಿದೆ. ಹೌದು, ರಾಜ್ಯದಲ್ಲಿ ಬರಗಾಲ ನಡುವೆಯೂ ಹಾಲಿನ ಉತ್ಪಾದನೆ ಮಾತ್ರ ಕುಗ್ಗಿಲ್ಲ. ಕಳೆದ ಐದು ವರ್ಷದಲ್ಲಿ ಈ ವರ್ಷವೇ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡಿದೆ.

ಕಳೆದ ತಿಂಗಳು ರಾಜ್ಯದಲ್ಲಿ ನಿತ್ಯ 82.09 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು, ಕಳೆದ ವರ್ಷ ನಿತ್ಯ 74.93.ಲಕ್ಷ ಲೀಟರ್ ಉತ್ಪಾದನೆಯಾಗಿತ್ತು.

2021-22 ಸಾಲಿನಲ್ಲಿ ನಿತ್ಯ 77.96 ಲಕ್ಷ ಲೀಟರ್ ಹಾಲು, 2019-20 ರ ಸಾಲಿನಲ್ಲಿ 69.03 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿದೆ. ಆದ್ರೆ ಈ ಬಾರಿ ಬರದ ಬವಣೆಯನ್ನ ಹೈನುಗಾರಿಕೆ ನೀಗಿಸಿದೆ. ಮುಂದಿನ ದಿನಗಳಲ್ಲಿ ನಿತ್ಯ ಒಂದು ಕೋಟಿ ಲೀ ಹಾಲು ಉತ್ಪಾದನೆ ಗುರಿಯನ್ನ ಕೆಎಂಎಫ್ ಇಟ್ಟುಕೊಂಡಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments