ಚಿತ್ರದುರ್ಗ : ಪರಿಶಿಷ್ಠ ಜಾತಿ,ಪರಿಶಿಷ್ಟ ಪಂಗಡಗಳಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆರ್ಥಿಕ ಅಭಿವೃದ್ದಿ ನಿಗಮ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮಗಳಿಂದ ನೀಡುವ ಸಾಲ ಸೌಲಭ್ಯದ ಬಗ್ಗೆ ಹೆಚ್ಚು ಪ್ರಚಾರ ನೀಡಿ ಸಾಲ ಕೋರಿ ಬಂದಿರುವ ಹಾಗೂ ಬಾಕಿ ಉಳಿದಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಎನ್ ಎಸ್ ಎಫ್ ಡಿಸಿಯ ಮುಖ್ಯ ಪ್ರಧಾನ ಡಾ. ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ. ವಿಜಯಕುಮಾರ್ ಸಾಲಕೋಟಿ ಸರ್ಕಾರಿ ಇಲಾಖಾಧಿಕಾರಿಗಳು ಹಾಗೂ ಬ್ಯಾಂಕ್ ನ ಅಧಿಕಾರಿಗಳಿಗೆ ಸೂಚಿಸಿದರು. ಅವರು ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತಾಡಿದರು.
ಕೇಂದ್ರ ಸಬಲೀಕರಣ ಹಾಗು ಸಾಮಾಜಿಕ ನ್ಯಾಯ ಇಲಾಖೆ ಅಡಿಯಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರ ಮಾರ್ಗ ಸೂಚಿಯಂತೆ ಎನ್ ಎಸ್.ಎಫ್.ಡಿ.ಸಿ. ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ. ವಿಜಯಕುಮಾರ್ ಸಾಲಕೋಟಿ ನೇತೃತ್ವದಲ್ಲಿ ಮೂರು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಲ್ಲಿ ಅವರು ಮಾತಾಡಿದರು.
ಕೇಂದ್ರ ಸಬಲೀಕರಣ ಹಾಗೂ ಸಾಮಾಜಿಕ ನ್ಯಾಯ ಇಲಾಖೆಯಡಿಯ ಕುರಿ ಹಾಗೂ ಹಸು ಸಾಕಾಣಿಕೆ ಮಾಡಿ ಅರ್ಥಿಕ ಅಭಿವೃದ್ದಿ ಸಾಧಿಸಲು ಮೇಲಿನ ನಿಗಮಗಳು ಎಸ್ಸಿ ಎಸ್ಟಿ ಹಾಗೂ ಓಬಿಸಿ ಇಲಾಖೆಗಳಿಗೆ ಅನುದಾನ ಬಿಡುಗಡೆ ಮಾಡುತ್ತಿದ್ದು, ಸುಮಾರು 30 ಸಾವಿರ ಕುಟುಂಬಗಳಿಗೆ ಸಾಲ ನೀಡಬಹುದಾಗಿದೆ. ಆದರೆ ಜಿಲ್ಲೆಯಲ್ಲಿ ಅರ್ಜಿಗಳೇ ಬಂದಿಲ್ಲ ಎಂದು ಹೇಳುತ್ತಿದ್ದಿರಾ ಎಂದು ವಿಜಯಕುಮಾರ್ ಅಚ್ಚರಿ ವ್ಯಕ್ತಪಡಿಸಿದರು.
ಈ ಸಾಲ ಮೇಳದ ಬಗ್ಗೆ ಸರಿಯಾದ ಪ್ರಚಾರವನ್ನು ಮಾಡುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ಜೊತೆಗೆ ಈಗಾಗಾಲೇ ಸಾಲ ಕೇಳಿ ಅರ್ಜಿ ಹಾಕಿರುವ ಹಾಗೂ ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಸಾಲ ದೊರೆಯುವಂತೆ ನೋಡಿಕೊಳ್ಳಬೇಕು. ಇದೇ 24 ರೊಳಗೆ ಎಲ್ಲಾ ವರದಿಯನ್ನು ಚಿತ್ರದುರ್ಗ ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್ ನಾಯ್ಕ್ ಅವರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು. ಇದೇ ಸಮಯದಲ್ಲಿ ಮಾತಾಡಿದ ಚಿತ್ರದುರ್ಗ ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್ ನಾಯ್ಕ್, ಬ್ಯಾಂಕ್ ಹಾಗೂ ಎಸ್ಸಿ ಎಸ್ಟಿ ಮತ್ತು ಓಬಿಸಿ ಇಲಾಖೆ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು.
ಹೆಚ್ಚು ಅರ್ಜಿಗಳನ್ನು ಸಾಲ ಮೇಳದಲ್ಲಿ ಹಾಕುವಂತೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್ ನಾಯ್ಕ್, ಎನ್ ಎಸ್ಟಿ ಎಫ್ ಡಿಸಿಯ ವಲಯ ವ್ಯವಸ್ಥಾಪಕಿ ಕೃಷ್ಣ ವೇಣಿ ಹಾಗೂ ಪರಿಶಿಷ್ಠ ಜಾತಿ,ಪರಿಶಿಷ್ಟ ಪಂಗಡಗಳಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆರ್ಥಿಕ ಅಭಿವೃದ್ದಿ ನಿಗಮ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮಗಳ ಅಧಿಕಾರಿಗಳು, ಹಾಗೂ ಮೂರು ಜಿಲ್ಲೆಗಳ ಬ್ಯಾಂಕ್ ಮತ್ತು ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
https://youtu.be/YcVf7tGQ_V0?si=DLkf4Fu6wyvdP-Vt