ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಜಾಮೀನು ರಹಿತ ವಾರೆಂಟ್..!

ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಮುಂಬೈನ ಅಂಧೇರಿ ವೆಸ್ಟ್ ನ್ಯಾಯಾಲಯವು ಈ ತೀರ್ಪು ನೀಡಿದ್ದು, ಅದರ ಜೊತೆಗೆ ವಾರಂಟ್ ರಹಿತ ಬಂಧನದ ಆದೇಶವನ್ನೂ ಜಾರಿಗೊಳಿಸಿದೆ. ತೀರ್ಪು ಹೊರಬೀಳುವ ದಿನದ ವಿಚಾರಣೆಯಲ್ಲಿ ಅವರು ನ್ಯಾಯಾಲಯಕ್ಕೆ ಹಾಜರಿರಲಿಲ್ಲ.
ಸೆಕ್ಷನ್ 138ರ ಅಡಿಯಲ್ಲಿ ರಾಮಗೋಪಾಲ್ ವರ್ಮಾ ಅವರನ್ನು ದೋಷಿ ಎಂದು ಪರಿಗಣಿಸಲಾಗಿದ್ದು. ಇದು ಚೆಕ್ ಬೌನ್ಸ್ ಹಾಗೂ ಬ್ಯಾಂಕ್ನಲ್ಲಿ ನೀಡಿದ ಚೆಕ್ಗೆ ಬೇಕಾದಷ್ಟು ಹಣ ಇಲ್ಲದಾಗ ನಡೆಯುವ ಅಪರಾಧಕ್ಕೆ ನೀಡಲಾಗುವ ಶಿಕ್ಷೆಯಾಗಿದೆ. ಕೇವಲ ಮೂರು ತಿಂಗಳು ಜೈಲು ಮಾತ್ರವಲ್ಲ ದೂರುದಾರರಿಗೆ ಸುಮಾರು 3.75 ಲಕ್ಷ ರೂಪಾಯಿ ಮೂರು ತಿಂಗಳೊಳಗಾಗಿ ನೀಡುವಂತೆಯೂ ಸಹ ಆದೇಶ ಹೊರಡಿಸಿದೆ.
2018ರಲ್ಲಿ ಆರ್ಜಿವಿ ಫರ್ಮ್ ವಿರುದ್ಧ ಶ್ರೀ ಮಹೇಶ್ ಚಂದ್ರ ಮಿಶ್ರಾ ಅವರು ಚೆಕ್ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದರು. ಜೂನ್ 2022ರಲ್ಲಿ ನಿರ್ದೇಶಕ ಇದೇ ಪ್ರಕರಣದಲ್ಲಿ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಐದು ಸಾವಿರ ರೂಪಾಯಿ ಸೆಕ್ಯೂರಿಟಿ ಡಿಪಾಸಿಟ್ ಪರ್ಸನಲ್ ಬಾಂಡ್ ನೀಡಿ ಬೇಲ್ ಪಡೆದಿದ್ದರು.




