ಮಂಡ್ಯ: ಯಾವುದೇ ಸರ್ಕಾರ ಬಂದರೂ, ಬದಲಾದರೂ ಹಳ್ಳಿ ರಸ್ತೆಗಳ ಬವಣೆ ಹೇಳ ತೀರದು. ರಸ್ತೆ ಗುಂಡಿಗಳಿಂದಲೇ ಅಪಘಾತ ಪ್ರಕರಣ ಹೆಚ್ಚುತ್ತಲೇ ಇವೆ. ಅಪಘಾತ ತಪ್ಪಿಸಲು ಕಲಾವಿದರೊಬ್ಬರು ಹೊಸ ಉಪಾಯ ಕಂಡುಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ನೋಡಿ.
ಮದ್ದೂರು ತಾಲ್ಲೂಕಿನ ಹಲವು ಗ್ರಾಮೀಣ ರಸ್ತೆಗಳು ಕಿತ್ತು ಬರುತ್ತಿವೆ. ರಸ್ತೆ ಡಾಂಬರ್ ಕಿತ್ತು ಅಪಘಾತ ಹೆಚ್ಚಾಗುತ್ತಿವೆ. ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಜೊತಗೆ, ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ತೂಬಿನಕೆರೆ ಗೋವಿಂದು. ಮೂಲತಃ ಕಲಾವಿದರಾದ ಇವರು, ಸಾಮಾಜಿಕ ಮತ್ತು ಜಾಗೃತಿ ಮೂಡಿಸುವ ಕಲೆಗಳನ್ನು ಬಿಡಿ ಗಮನ ಸೆಳೆಯುವ ವ್ಯಕ್ತಿ. ಮದ್ದೂರು ತಾಲ್ಲೂಕಿನ ಹಲವು ಗ್ರಾಮದಲ್ಲಿ ರಸ್ತೆಗಳು ಕಿತ್ತು ಬರುತ್ತಿವೆ. ಕಿತ್ತು ಬರುತ್ತಿರುವ ರಸ್ತೆಗಳು ಕಂಡಲ್ಲಿ ಚಿತ್ರ ಬಿಡಿಸಿ ಜಾಗೃತಿ ಮೂಡಿಸುತ್ತಿದ್ದಾರೆ.
ಮದ್ದೂರು ತಾಲ್ಲೂಕಿನ ಕೊಪ್ಪ ರಸ್ತೆ, ಕುಣಿಗಲ್ ರಸ್ತೆ, ಕೊಕ್ಕರೆ ಬೆಳ್ಳೂರು ರಸ್ತೆ ಸೇರಿದಂತೆ ಹಲವು ಗ್ರಾಮೀಣ ರಸ್ತೆಗಳು ಇವರ ಕಲೆಗೆ ಸಾಕ್ಣಿಯಾಗಿವೆ. ಗೋಡೆ ಬರಹ ಮತ್ತು ಚಿತ್ರಗಳನ್ನು ಬಿಡಿಸಿ ಗಮನ ಸೆಳೆಯುತ್ತಿದ್ದಾರೆ.