Friday, August 22, 2025
24.2 C
Bengaluru
Google search engine
LIVE
ಮನೆಜಿಲ್ಲೆಸಿಎಂಗಿಲ್ಲ ಆಮಂತ್ರಣ : ಸಚಿವೆಗೆ ಕೊಟ್ಟಿದ್ಯಾಕೆ?

ಸಿಎಂಗಿಲ್ಲ ಆಮಂತ್ರಣ : ಸಚಿವೆಗೆ ಕೊಟ್ಟಿದ್ಯಾಕೆ?

ರಾಮಮಂದಿರ : ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ ,ದೇಶದ ಹಿಂದೂಗಳ ಕನಸಿನ ರಾಮಮಂದಿರವೆಂದು ಬಿಂಬಿಸಿ ಬಿಜೆಪಿ ನಡೆಸಿದ ಸುದೀರ್ಘ ಪರಿಶ್ರಮಕ್ಕೆ ಫಲ ಸಿಕ್ಕಂತಾಗಿದೆ ,೨೦೨೫ ಕ್ಕೆ ರಾಮ ಮಂದಿರದ ಸಂಪೂರ್ಣ ಕಾಮಾಗಾರಿ ಮುಗಿಯಲಿದೆ ಎಂಬ ವಾಸ್ತವವನ್ನ ಬದಿಗಿಟ್ಟು ಲೋಕ ಯುದ್ಧ ಗೆಲ್ಲಲು ಆತುರಾತುರವಾಗಿ ಉದ್ಘಾಟಿಸೋ ಉತ್ಸುಕತೆ ಬಿಜೆಪಿಗೆ ಲಾಭ ತಂದುಕೊಡುವುದರಲ್ಲಿ ಸಂದೇಹವಿಲ್ಲ , ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ೩೦ ವರ್ಷದ ಹಿಂದಿನ ಪ್ರಕರಣವನ್ನ ಕೆದಕಿ ಕಾಂಗ್ರೆಸ್ ಬಿಜೆಪಿಗರ ಕೆಂಗೆಣ್ಣಿಗೆ ಗುರಿಯಾಗಿದೆ ,ಹೀಗಿರುವಾಗ ರಾಮಮಂದಿರದ ವಿಚಾರದ ಬಗ್ಗೆ ಆಸಕ್ತಿ ತೋರದ ಮತ್ತು ಅಂದಿನಿಂದ ನಖಶಿಖಾಂತವಾಗಿ ಎದುರಿಸಿಕೊಂಡು ಬರುತ್ತಿರುವ ಕಾಂಗ್ರೆಸ್ ಪಕ್ಷದ ಹಿರಿಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಸಿಕ್ಕಿರುವುದು ಮಾತ್ರ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಯೋಧ್ಯೆಯಲ್ಲಿ ಆಗೋ ರಾಮಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ ಎಂದು ನೇರವಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯ ಸಚಿವೆಗೆ ಸಿಕ್ಕಿರೋ ಆಮಂತ್ರಣಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನುವುದು ಈಗ ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಜೊತೆಗೆ ಸಿಎಂ, ಡಿಸಿಎಂ ಮತ್ತು ಉಳಿದ ಹಿರಿಯ ಸಚಿವರಿಗೆ ಸಿಗದೇ ಇರುವ ಆಮಂತ್ರಣ ಮಹಿಳಾ ಸಚಿವೆಗೆ ಮಾತ್ರ ಸಿಕ್ಕಿರುವುದು ಲಕ್ಷ್ಮಿ ಹೆಬ್ಬಾಳ್ಕರ ಜೊತೆಗಿನ ಹಿಂದೂ ಸಂಘಟನೆಯ ಆತ್ಮೀಯತೆಯನ್ನು ಸ್ವಪಕ್ಷದವರೇ ಚರ್ಚಿಸುವಂತೆ ಮಾಡಿದೆ. ಇನ್ನು ಈ ಹಿಂದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಮಮಂದಿರ ಉದ್ಘಾಟನೆ ಹೋಗ್ತೀರಾ ಎಂಬ ಪ್ರಶ್ನೆಗೆ ಸಿಎಂಗೆ ಆಹ್ವಾನ ಬಂದಿಲ್ಲ ನೋಡೋಣ ಎಂದಿದ್ರು. ಇದೀಗ ಸಿಎಂಗೆ ನೀಡದ ಆಹ್ವಾನ ಸಚಿವೆಗೆ ಬಂದಿರೋದ್ರಿಂದ ಹೋಗ್ತಾರಾ ಬಿಡ್ತಾರಾ ಎನ್ನುವ ಕೂತುಹಲ ಹೆಚ್ಚಾಗಿದೆ.

ವಿಶ್ವ ಹಿಂದೂ ಪರಿಷತ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರನ್ನ ಭೇಟಿ ಮಾಡಿ ಅಯೋಧ್ಯೆ ಉದ್ಘಾಟನೆ ಆಮಂತ್ರಣ ಕೊಟ್ಟಿದ್ದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಕಾರ್ಯಕ್ರಮಕ್ಕೆ ಹೋಗ್ತಾರಾ ಅಥವಾ ಸುಮ್ಮನಾಗ್ತಾರ ಅನ್ನೋದನ್ನ ಕಾದು ನೋಡಬೇಕಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments