Friday, May 2, 2025
30.3 C
Bengaluru
LIVE
ಮನೆ#Exclusive NewsTop NewsBDA ಕೆಂಪೇಗೌಡ ಬಡಾವಣೆ ಅಧ್ವಾನಗಳ ಮಹಾಪೂರ

BDA ಕೆಂಪೇಗೌಡ ಬಡಾವಣೆ ಅಧ್ವಾನಗಳ ಮಹಾಪೂರ

ಬಿಡಿಎ ಕೆಂಪೇಗೌಡ ಲೇಔಟ್ ನಿರ್ಮಿಸಿ ದಶಕ ಕಳೆದ್ರೂ ಮೂಲಭೌತ ಸೌಕರ್ಯಗಳು ಸಿಕ್ಕಿಲ್ಲ. ಬಡಾವಣೆಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅಧಿಕಾರಿ ವರ್ಗ ವಿಳಂಬ ಧೋರಣೆ ತಾಳುತ್ತಿದೆ. 2024ರ ನವೆಂಬರ್ ವೇಳೆಗೆ ಮೂಲಸೌಕರ್ಯ ನೀಡುವ ಭರವಸೆಯನ್ನು ಬಿಡಿಎ ನೀಡಿತ್ತು. ಆದ್ರೆ ಈವರೆಗೂ ಕೆಂಪೇಗೌಡ ಲೇಔಟ್​​ಗೆ ಯಾವುದೇ ಮೂಲಭೌತ ಸೌಕರ್ಯ ಭಾಗ್ಯ ಸಿಕ್ಕಿಲ್ಲ.

ಈಗಲೂ ಬಿಡಿಎ ಕೆಂಪೇಗೌಡ ಬಡಾವಣೆ ಕಗ್ಗತ್ತಲಲ್ಲಿ ಮುಳುಗಿದೆ. ಕೊಮ್ಮಘಟ್ಟದಲ್ಲಿ 32 ಕೋಟಿ ವೆಚ್ಚದಲ್ಲಿ 66/7 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾಗಿ ಆರು ತಿಂಗಳು ಆದ್ರೂ ವಿದ್ಯುತ್ ಸರಬರಾಜು ಭಾಗ್ಯ ಮಾತ್ರ ಸಿಕ್ಕಿಲ್ಲ.ಯೋಜಿತ 5 ಉಪ ಕೇಂದ್ರದಲ್ಲಿ ಕೇವಲ 1 ರ ಕಾಮಗಾರಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ ಕಾರ್ಯರಂಬಿಸಿಲ್ಲ.

ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆಯಾಗಿರುವ 30 ಸಾವಿರ ನಿವೇಶನಗಳಿಗೆ ವಿದ್ಯುತ್ ಪೂರೈಸಲು 240 ಮೆಗಾವ್ಯಾಟ್​ ಅವಶ್ಯಕತೆ ಇದೆ. 66/11 ಕೆವಿ ಸ್ಟೇಷನ್ ಮತ್ತು 4 ಉಪ ಕೇಂದ್ರಗಳ ನಿರ್ಮಾಣಕ್ಕೆ ಒಂದು ಅಂದಾಜಿನ ಪ್ರಕಾರ ಒಂದು ಉಪಕೇಂದ್ರ ಸ್ಥಾಪನೆಗೆ 25ರಿಂದ 30 ಕೋಟಿ ವೆಚ್ಚವಾಗಲಿದೆ.

ಕೊಮ್ಮಘಟ್ಟದಲ್ಲಿ 66/11 ಕೆವಿ ವಿದ್ಯುತ್ ಉಪಕೇಂದ್ರ . ಉಪಕೇಂದ್ರ ನಿರ್ಮಾಣದ ಟೆಂಡರನ್ನು ಎಸ್‌ಎಂ ಕಾಮಗಾರಿಯ ಎಂಜಿನಿಯರ್‌ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ ವಹಿಸಲಾಗಿತ್ತು, ಸುಮಾರು 32 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಟೆಂಡರ್‌ನಲ್ಲಿ ನಮೂದಿಸಿರುವಂತೆ ಕಾಮಗಾರಿ ಪೂರ್ಣಗೊಳ್ಳಲು 13 ತಿಂಗಳ ಕಾಲಾವಧಿ ನೀಡಲಾಗಿತ್ತು.ಆದ್ರೆ, ಸುಮಾರು 3 ವರ್ಷಗಳ ನಂತರವೂ ಉಪಕೇಂದ್ರವು ಕಾರ್ಯಾರಂಭ ಮಾಡಿಲ್ಲ.

ವಿದ್ಯುತ್ ಜಾಲ ಕಾಮಗಾರಿ ಇಡೀ ಬಡಾವಣೆಯಲ್ಲಿ ಈಗಷ್ಟೇ ಮಾಡಬೇಕಿದೆ. ಉಪಕೇಂದ್ರ ಕಾರ್ಯಾರಂಭಿಸದೇ ಇರೋದ್ರಿಂದ ಕೆಂಪೇಗೌಡ ಬಡಾವಣೆಯಲ್ಲಿ ಮನೆ ಕಟುತ್ತಿರುವವರು ವಿದ್ಯುತ್ ಹತ್ತಿರದ ಖಾಸಗಿ ಬಡಾವಣೆಗಳಿಂದ,ಹಳ್ಳಿ ಗಳಿಂದ ಪಡೆಯುವ ಪರಿಸ್ಥಿತಿ ಇದೆ. ಬಿಡಿಎ ಯಾವಾಗ ಎಚ್ಚೆತ್ತುಕೊಳ್ಳುತ್ತೋ?

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments