ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ ಅಂತ ಕಾಯ್ತಿದ್ದ ವಿಐಪಿ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಡ್ತು ಮಾರ್ಟಿನ್ ಚಿತ್ರ ತಂಡ….ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರ್ತಿರೋ ಮಾರ್ಟಿನ್ ಮತ್ತೊಂದು ವಿಚಾರದಲ್ಲಿ ದಾಖಲೆಯನ್ನು ಮಾಡಲು ಹೊರಟಿದೆ.. ಇದೆ ಮೊದಲ ಬಾರಿಗೆ ಭಾರತದ ಇತಿಹಾಸದಲ್ಲೇ ಹೊಸದೊಂದು ಪ್ರಯತ್ನಕ್ಕೆ ಮಾರ್ಟಿನ್ ಚಿತ್ರ ತಂಡ ಮುಂದಾಗಿದೆ.ಅದೇನಪ್ಪಅಂದ್ರೆ ,ಆಗಸ್ಟ್ 5ಕ್ಕೆ ಇಂಡಿಯಾಸ್ ಫಸ್ಟ್ ಎವರ್ ಇಂಟರ್ನ್ಯಾಶನಲ್ ಪ್ರೆಸ್ ಮೀಟ್ ಮಾಡಲು ಮಾರ್ಟಿನ್ ತಂಡ ಸಜ್ಜಾಗಿದೆ..
ಇದು ಮಾರ್ಟಿನ್ ತಂಡಕ್ಕಷ್ಟೇ ಅಲ್ಲ,ಇಡಿ ಸ್ಯಾಂಡಲ್ ವುಡ್ ಗೆ, ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಅಂದ್ರೆ ತಪ್ಪಾಗಲಾರದು..ಯಾಕಂದ್ರೆ ಇದು ಅಂತಿಂತ ಪ್ರೆಸ್ ಮೀಟ್ ಅಲ್ಲ, ರಾಜ್ಯಕ್ಕೆ ಸೀಮಿತವಾದ , ಪ್ರೆಸ್ ಮೀಟ್ ಅಲ್ಲ. ಇತ್ತೀಚಿಗೆ ಎಲ್ಲ ಸೌತ್ ಸಿನಿಮಾಗಳು ಪಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮಾಡಿ ಸದ್ದು ಮಾಡ್ತಿದ್ರೆ, ಮಾರ್ಟಿನ್ ಚಿತ್ರ ತಂಡ ಇನ್ನೊಂದು ಲೆವೆಲ್ ಗೆ ಹೋಗಿ ಸಖತ್ ಸೌಂಡ್ ಮಾಡ್ತಿದೆ.. ಪ್ರಥಮ ಬಾರಿಗೆ ಕನ್ನಡ ಸಿನಿಮಾವೊಂದು ಇಂಟರ್ನ್ಯಾಷನಲ್ ಮಟ್ಟದಲ್ಲಿ ಪ್ರೆಸ್ ಮೀಟ್ ಮಾಡಲು ಮುಂದಾಗಿದೆ.ಭಾರತದ ರಿಪೋರ್ಟರ್ಸ್ ಸೇರಿದಂತೆ, 28 ದೇಶದ ಮಾಧ್ಯಮ ಪ್ರತಿನಿಧಿಗಳು ಮಾರ್ಟಿನ್ ಟ್ರೇಲರ್ ರಿಲೀಸ್ ಗೆ ಸಾಕ್ಷಿಯಾಗಲಿದ್ದಾರೆ..ಇದು ಭಾರತದ ಮಟ್ಟಿಗೆ ಹೊಸ ಪ್ರಯೋಗವಾಗಿದ್ದು,ಇಂಡಿಯನ್ ಫೆಟರ್ನಿಟಿಯಲ್ಲೇ ನಡೆಯಲಿದೆ ಮಾರ್ಟಿನ್..5ನೇ ತಾರೀಖು ಮುಂಬೈನಲ್ಲಿ ಮಾರ್ಟಿನ್ ಸಿನಿಮಾ ಟ್ರೈಲರ್ ರಿಲೀಸ್ ಆಗಲಿದ್ದು,.ಇದು ಕನ್ನಡಿಗರ ಪಾಲಿಗೆ ಹೆಮ್ಮೆಯ ಕ್ಷಣವಾಗಲಿದೆ.. . ಆಗಸ್ಟ್ ೫ ರಂದು ಮುಂಬೈನಲ್ಲಿ ಮಾರ್ಟಿನ್ ಸಿನಿಮಾದ ಟ್ರೇಲರ್ ಕನ್ನಡ,ತೆಲುಗು,ತಮಿಳು,ಹಿಂದಿ ಸೇರಿದಂತೆ,ಕೊರಿಯನ್,ಚೈನಾ,ಜಪಾನ್ ಹೀಗೆ ಒಟ್ಟು ಒಟ್ಟು 12 ಭಾಷೆಗಳಲ್ಲಿ ರಿಲೀಸ್ ಆಗಲಿದೆ ..ಅದಕ್ಕೂ ಮೊದಲು ಪ್ರೀತಿಯ ಕನ್ನಡಿಗರಿಗಾಗಿ ಆಗಸ್ಟ್ 4ರಂದು ಮಾರ್ಟಿನ್ ಸಿನಿಮಾದ ಪೆಯ್ಡ್ ಟ್ರೇಲರ್ ರಿಲೀಸ್ ವೀರೇಶ್ ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ.ವೀರೇಶ್ ಥಿಯೇಟರ್ ನಲ್ಲಿ ಎರಡು ಶೋ ಇದ್ದು,.ಥಿಯೇಟರ್ ನಲ್ಲಿ ಟ್ರೇಲರ್ ರಿಲೀಸ್ ಆಗುವ ಕಲೆಕ್ಷನ್ ಹಣವನ್ನು ಮಾರ್ಟಿನ್ ಚಿತ್ರ ತಂಡ ಗೋಶಾಲೆಗೆ ಕೊಡಲಿದ್ದು, ಆಗಸ್ಟ್ ಎರಡನೇ ತಾರೀಖಿನಿಂದಲೇ, ಬುಕ್ ಮೈ ಶೋನಲ್ಲಿ ಮಾರ್ಟಿನ್ ಸಿನಿಮಾದ ಟ್ರೇಲರ್ ಬುಕಿಂಗ್ ಶುರುವಾಗಲಿದೆ.. ಆಗಸ್ಟ್ 4ರಂದು ಮಧ್ಯಾಹ್ನ 1 ಗಂಟೆಗೆ ಟ್ರೇಲರ್ ರಿಲೀಸ್ ಆಗಲಿದೆ..ಅಭಿಮಾನಿಗಳು ಆಗಸ್ಟ್ ೪ಕ್ಕೆ ಎದುರು ನೋಡುತ್ತಿದ್ದಾರೆ.. ಇನ್ನು ಮಾರ್ಟಿನ್ ಸಿನಿಮಾ ಅಕ್ಟೋಬರ್ ೧೧ ಕ್ಕೆ ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಅಗಲಿದ್ದು, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ, ದಸರಾ ಹಬ್ಬಕ್ಕೆ ಡಬಲ್ ಧಮಾಕ ಸಿಗಲಿದೆ.

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


