ಬೆಂಗಳೂರು : ಸಾವಿರಾರು ಕೋಟಿ ಬಂಡವಾಳ ಹಾಕಿ ಬೆಂಗಳೂರು ನಗರ ಸಿಟಿ ಸುತ್ತಮುತ್ತ ಬಿಡಿಎ ಹೈಫೈ ಫ್ಲಾಟ್ಗಳನ್ನ ಕಟ್ಟಿದೆ. ಆದ್ರೆ ಫ್ಲ್ಯಾಟ್ ಗಳನ್ನೇ ಕೇಳೋರೇ ಇಲ್ಲ. ಇದೀಗ ಶತಯಾಗತಾಯ ಫ್ಲ್ಯಾಟ್ ಗಳನ್ನೇ ಸೇಲ್ ಮಾಡಲೇಬೇಕು ಅಂತ ಪ್ರಾಧಿಕಾರ ಹೊರಟಿದೆ. ನಗರದಲ್ಲಿ ಫ್ಲ್ಯಾಟ್ ಮಾರಾಟ ಚುರುಕಗೊಳಿಸಲು ಇನ್ನಷ್ಟು ಗ್ರಾಹಕ ಸ್ನೇಹಿ ನಿಯಮಗಳನ್ನು ಜಾರಿ ಮಾಡಿದೆ.

ಹೌದು.ಬೆಂಗಳೂರಿನಲ್ಲೊಂದು ಸ್ವಂತ ಮನೆ ಮಾಡಬೇಕೆಂಬ ಆಸೆ ಎಲ್ಲರಿಗೂ ಇರುತ್ತೆ. ಆದ್ರೆ, ಬೆಂಗಳೂರಿನಲ್ಲಿ ಸೈಟ್‌, ಫ್ಲ್ಯಾಟ್‌ ಕೊಳ್ಳಬೇಕಾದರೆ ಅತ್ಯಂತ ಎಚ್ಚರಿಕೆಯಿಂದ ಇರಬೇಕು, ಇಲ್ಲವಾದರೆ ಮೋಸ ಹೋಗೋದು ಗ್ಯಾರೆಂಟಿ. ಹೀಗಾಗಿ,ಬಿಡಿಎ ಮನೆಗಳನ್ನು ಕಟ್ಟಿ ಮಾರಾಟ ಮಾಡುತ್ತದೆ. ಸರ್ಕಾರಿ ಸಂಸ್ಥೆಯಾದ ಬಿಡಿಎನಿಂದ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಮಾಡಲಾಗಿದ್ದು,ಇದನ್ನ ಮಾರಾಟ ಮಾಡೋಕೆ BDA FLAT ಮೇಳ ನಡೆಸುತ್ತಿದೆ. ಇದೇ ಮೊದಲ ಬಾರಿಗೆ ಈ ಮೇಳ ನಡೆಯುತ್ತಿದ್ದು, ಮನೆ ಕೊಳ್ಳಬೇಕೆಂದು ನೋಡುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಫೆಬ್ರವರಿ 17 ರಂದು ಈ ಫ್ಲ್ಯಾಟ್‌ ಮೇಳ ನಡೆಯಲಿದೆ. ಈ ವೇಳೆ ಆರಂಭಿಕ ಠೇವಣಿ ಪಾವತಿ ಮಾಡಿದರೆ ಸ್ಥಳದಲ್ಲೇ ಹಂಚಿಕೆ ಪತ್ರ ವಿತರಿಸಲಾಗುತ್ತದೆ ನಂತರ ಬ್ಯಾಂಕ್‌ ಲೋನ್‌ ಮಾಡಿಸಿದರೆ, ಕೇವಲ ಹತ್ತೇ ದಿನದಲ್ಲಿ ಫ್ಲ್ಯಾಟ್‌ ನಿಮ್ಮ ಹೆಸರಿಗೆ ನೋಂದಣಿಯಾಗಲಿದೆ. ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಬಿಡಿಎ ಅಧಿಕಾರಿಗಳು ಈ ಮೇಳವನ್ನು ಆಯೋಜನೆ ಮಾಡಿದ್ದಾರೆ. ಮನೆ ಬೇಕು ಎಂದುಕೊಂಡವರು ಈ ಮೇಳದ ಸದುಪಯೋಗಪಡಿಸಿಕೊಳ್ಳಬಹುದು.

ಮೈಸೂರು ರಸ್ತೆಯ ಕೊಮ್ಮಘಟ್ಟ, ಕಣಿಮಿಣಿಕೆ ಹಾಗೂ ಕೋನದಾಸಪುರದಲ್ಲಿ ಬಿಡಿಎ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಲಾಗಿದೆ. ಜೊತೆಗೆ ಚಂದ್ರಾ ಲೇಔಟ್‌ನಲ್ಲೂ ಫ್ಲ್ಯಾಟ್‌ಗಳು ಖಾಲಿ ಇವೆ. ಕೊಮ್ಮಘಟ್ಟದಲ್ಲಿ 18, ಕೊಮ್ಮಘಟ್ಟ ಎರಡನೇ ಹಂತದಲ್ಲಿ 40, ಕಣಿಮಿಣಿಕೆ 2ನೇ ಹಂತದಲ್ಲಿ 491, ಕಣಿಮಿಣಿಕೆ 3ನೇ ಹಂತದಲ್ಲಿ 246, ಕಣಿಮಿಣಿಕೆ 4ನೇ ಹಂತದಲ್ಲಿ 52 ಕೋನದಾಸಪುರ ವಿಲೇಜ್‌ ಫೇಸ್‌ 2ನಲ್ಲಿ 462 ಹಾಗೂ ಚಂದ್ರಾ ಲೇಔಟ್‌ನಲ್ಲಿ 40 ಫ್ಲಾಟ್‌ಗಳು ಮಾರಾಟಕ್ಕಿವೆ.

ಬಿಡಿಎ ಬೇರೆ ಬೇರೆ ಫೇಸ್‌ಗಳಲ್ಲಿ ಸುಮಾರು 2398 ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಿದೆ. ಇದರಲ್ಲಿ 1349 ಫ್ಲ್ಯಾಟ್‌ಗಳು ಖಾಲಿ ಇದ್ದು, ಇವುಗಳನ್ನು ಫ್ಲ್ಯಾಟ್‌ ಮೇಳದ ಮೂಲಕ ಮಾರಾಟ ಮಾಡಲಾಗುತ್ತಿದೆ. ಫೆಬ್ರವರಿ 17 ರಂದು ಕೋನದಾಸಪುರ ವಸತಿ ಸಮುಚ್ಚಯದ ಬಳಿ ಈ ಮೇಳ ನಡೆಯಲಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ಫ್ಲ್ಯಾಟ್‌ ಮೇಳ ನಡೆಯಲಿದೆ. ಈ ಸಮಯದಲ್ಲಿ ಬಂದು ಫ್ಲ್ಯಾಟ್‌ ಖರೀದಿ ಮಾಡೋದಕ್ಕೆ ಅವಕಾಶವಿದೆ.

ಆನ್‌ಲೈನ್‌ ಮೂಲಕ ಅಥವಾ ಡಿಡಿ ಮೂಲಕ ಆರಂಭಿಕ ಠೇವಣಿ ಪಾವತಿಸಿದರೆ ಸ್ಥಳದಲ್ಲೇ ಅಧಿಕಾರಿಗಳು ಹಂಚಿಕೆ ಪತ್ರ ನೀಡುತ್ತಾರೆ. ಇನ್ನು ಬ್ಯಾಂಕ್‌ ಅಧಿಕಾರಿಗಳು ಕೂಡಾ ಆಗಮಿಸುವವರಿದ್ದು, ಸ್ಥಳದಲ್ಲೇ ಸಾಲ ಮಂಜೂರಾತಿ ಕೂಡಾ ನಡೆಯುತ್ತದೆ. ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡರೆ ಹತ್ತೇ ದಿನದಲ್ಲಿ ರಿಜಿಸ್ಟ್ರೇಷನ್‌ ಕೂಡಾ ಮುಗಿಯಲಿದೆ.

By admin

Leave a Reply

Your email address will not be published. Required fields are marked *

Verified by MonsterInsights