
ಇರಾನ್ನಲ್ಲಿ ಆಡಳಿತ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಅಮೇರಿಕಾ ಮತ್ತು ಇಸ್ರೇಲ್ ರೂಪಿಸಿದ್ದ ಸಂಯುಕ್ತ ಯೋಜನೆಗೆ ದೊಡ್ಡ ಅಡ್ಡಿ ಎದುರಾಗಿದೆ. ಇರಾನ್ ಸೇನೆ ಹಾಗೂ ಹೊಸ ನಾಯಕ ಮೊಜ್ತಬಾ ಖಮೇನಿ ಅವರ ತಂತ್ರಗಳು ಅಮೇರಿಕಾದ ಲೆಕ್ಕಾಚಾರವನ್ನು ಉಲ್ಟಾ ಮಾಡಿವೆ.
ಇದರ ಮಧ್ಯೆ, ಅತ್ಯಂತ ಪ್ರಮುಖವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವುದು ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯಿಂದ ಒತ್ತಡಕ್ಕೆ ಒಳಗಾದ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೇರಿಕಾ, ಸಹಾಯಕ್ಕಾಗಿ ನ್ಯಾಟೋ ರಾಷ್ಟ್ರಗಳ ಮೊರೆಹೋದರೂ, ಅಲ್ಲಿ ನಿರಾಶೆ ಎದುರಿಸಿದೆ.

ಅಮೇರಿಕಾದ ಬೆಂಬಲಕ್ಕೆ ನಿಲ್ಲಬೇಕಿದ್ದ ನ್ಯಾಟೋ ರಾಷ್ಟ್ರಗಳು ಈ ಯುದ್ಧದಲ್ಲಿ ಭಾಗವಹಿಸಲು ನಿರಾಕರಿಸಿರುವುದು ಟ್ರಂಪ್ ಆಡಳಿತಕ್ಕೆ ದೊಡ್ಡ ಶಾಕ್ ಆಗಿದೆ. ಈ ಪ್ರಸ್ತಾವನೆಯನ್ನು ನ್ಯಾಟೋ ದೇಶಗಳು ಖಡಾಖಂಡಿತವಾಗಿ ತಳ್ಳಿ ಹಾಕಿವೆ.
ಇದೇ ವೇಳೆ, ಅಮೇರಿಕಾದ ಆಡಳಿತದಲ್ಲಿ ಒಳಸಮಸ್ಯೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಜೋಸೆಫ್ ನೀಡಿದ ಹೇಳಿಕೆಗಳು ಈ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿವೆ.




