Wednesday, January 28, 2026
24.9 C
Bengaluru
Google search engine
LIVE
ಮನೆ#Exclusive NewsTop News20,000 ಸಸಿಗಳನ್ನು ನೆಡಲು ಮುಂದಾದ ಬಿಎಂಆರ್​ಸಿಎಲ್

20,000 ಸಸಿಗಳನ್ನು ನೆಡಲು ಮುಂದಾದ ಬಿಎಂಆರ್​ಸಿಎಲ್

ಬೆಂಗಳೂರು : ನಗರದ ಸಂಚಾರ ನಾಡಿ  ಎಂದೇ ಹೆಸರು ಪಡೆದ ‘ನಮ್ಮ ಮೆಟ್ರೋ’ ಮತ್ತೊಂದು ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬರೋಬ್ಬರಿ 5.28 ಕೋಟಿ ವೆಚ್ಚದಲ್ಲಿ 20,000 ಸಸಿಗಳನ್ನು ನೆಡಲು ಮುಂದಾಗಿದೆ.

ನಮ್ಮ ಮೆಟ್ರೋದ 2ಎ, 2ಬಿ ಹಂತದ ಯೋಜನೆಗಾಗಿ 7,252 ಮರಗಳಿಗೆ ಕತ್ತರಿ ಹಾಕಲಾಗಿದೆ. ಈ ಮರಗಳಿಗೆ ಪರ್ಯಾಯವಾಗಿ ಬೆಂಗಳೂರು ಹೊರವಲಯದಲ್ಲಿ 20 ಸಾವಿರ ಗಿಡಗಳನ್ನು ನಡೆಲು ಬಿಎಂಆರ್​ಸಿಎಲ್ ಮುಂದಾಗಿದೆ.

ನಮ್ಮ ಮೆಟ್ರೋ ಯೋಜನೆಗಳಿಗಾಗಿ 2021-2023 ಅವಧಿಯಲ್ಲಿ 3626 ಮರಗಳಿಗೆ ಕತ್ತರಿ ಹಾಕಲಾಗಿದೆ. 2021 ರಿಂದ 2022 ರವರೆಗೆ 856 ಮರಗಳನ್ನು ನಗರದ ವಿವಿಧ ಭಾಗಗಳಿಗೆ ಹಾಗೂ ಹೊರವಲಯಕ್ಕೆ ಸ್ಥಳಾಂತ ಮಾಡಲಾಗಿದೆ. ಅದೇ ರೀತಿ 2022 ರಿಂದ ಜನವರಿ 2023ರವರೆಗೆ ಹಂತ 2ಎ ಮತ್ತು ಹಂತ 2ಬಿಗಾಗಿ 107 ಮರಗಳನ್ನು ಸ್ಥಳಾಂತರ ಮಾಡಲಾಗಿದೆ. ಮತ್ತು 1165 ಮರಗಳನ್ನು ಕಡಿಯಲಾಗಿದೆ. 1193 ಮರಗಳನ್ನು ಯಶಸ್ವಿಯಾಗಿ ಸ್ಥಳಾಂತರ ಮಾಡಲಾಗಿದೆ. ಇದೀಗ ತಲಾ 1.32 ಕೋಟಿ ವೆಚ್ಚದಲ್ಲಿ 4 ಹಂತದಲ್ಲಿ ಬೆಂಗಳೂರು ಗ್ರಾಮಾಂತರದ ವಿವಿಧೆಡೆ ಸಸಿಗಳನ್ನು 20 ಬಿಎಂಆರ್​ಸಿಎಲ್ ಮುಂದಾಗಿದೆ.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments