Thursday, May 1, 2025
30.3 C
Bengaluru
LIVE
ಮನೆಕ್ರೈಂ ಸ್ಟೋರಿಗಂಡ ಹೆಂಡತಿ ಜಗಳ 3 ವರ್ಷದ ಮಗು ಕೊಲೆಯಲ್ಲಿ ಅಂತ್ಯ

ಗಂಡ ಹೆಂಡತಿ ಜಗಳ 3 ವರ್ಷದ ಮಗು ಕೊಲೆಯಲ್ಲಿ ಅಂತ್ಯ

ಮಹಾರಾಷ್ಟ್ರ: ಗಂಡ ಹೆಂಡತಿ ಜಗಳ 3 ವರ್ಷದ ಮಗುವಿನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಪತಿಯೊಂದಿಗೆ ಜಗಳವಾಡಿದ ಮಹಿಳೆ ತನ್ನ  ಕೋಪವನ್ನು ಮಗುವಿನ ಮೇಲೆ ತೋರಿಸಿ ಕೊಂದೇ ಬಿಟ್ಟಿದ್ದಾಳೆ. ಬಳಿಕ ಮಗುವಿನ ಶವದೊಂದಿಗೆ 4 ಕಿಲೋಮೀಟರ್‌ಗಳವರೆಗೆ ಬೀದಿಯಲ್ಲಿ ಓಡಾಡಿದ್ದಾಳೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಘಟನೆ ಸೋಮವಾರ ಸಂಜೆ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಯನ್ನುಟ್ವಿಂಕಲ್ ರಾವುತ್ (23) ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಉದ್ಯೋಗದಕ್ಕಾಗಿ ತನ್ನ ಪತಿ ರಾಮ ಲಕ್ಷ್ಮಣ್ ರಾವುತ್ (24) ಜೊತೆಗೆ ನಾಗ್ಪುರಕ್ಕೆ ಬಂದಿದ್ದರು ಎಂದು ಪಿಟಿಐ ವರದಿ ಮಾಡಿದೆ.

ದಂಪತಿಗಳು ಪೇಪರ್ ಉತ್ಪನ್ನಗಳ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಎಂಐಡಿಸಿ ಪ್ರದೇಶದ ಹಿಂಗ್ನಾ ರಸ್ತೆಯಲ್ಲಿರುವ ಸಂಸ್ಥೆಯ ಆವರಣದಲ್ಲಿದ್ದ ಕೋಣೆಯಲ್ಲಿ ವಾಸಿಸುತ್ತಿದ್ದರು. ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಇಬ್ಬರೂ ಜಗಳವಾಡಿದ್ದಾರೆ ಎಂದು ಎಂಐಡಿಸಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ತೀವ್ರ ವಾಗ್ವಾದದ ಸಮಯದಲ್ಲಿ, ಅವರ ಮೂರು ವರ್ಷದ ಮಗು ಅಳಲು ಪ್ರಾರಂಭಿಸಿದ್ದು,ಕೋಪದ ಭರದಲ್ಲಿ ಮಹಿಳೆ ತನ್ನ ಮಗುವನ್ನು ಹೊರಗೆ ಕರೆದೊಯ್ದು ಮರದ ಕೆಳಗೆ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ನಂತರ ದೇಹದೊಂದಿಗೆ ಸುಮಾರು ನಾಲ್ಕು ಕಿಲೋಮೀಟರ್ ಸುತ್ತಾಡಿದಳು. ರಾತ್ರಿ 8 ಗಂಟೆ ಸುಮಾರಿಗೆ ಪೊಲೀಸ್ ಗಸ್ತು ವಾಹನವನ್ನು ನೋಡಿದ ಆಕೆ ನಡೆದ ಘಟನೆಯನ್ನು ಅಧಿಕಾರಿಗಳಿಗೆ ತಿಳಿಸಿದ್ದಾಳೆ. ಪೊಲೀಸರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಮಗು ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಎಂಐಡಿಸಿ ಪೊಲೀಸರು ನಂತರ ಮಹಿಳೆಯನ್ನು ಬಂಧಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಕೇಸು ದಾಖಲಿಸಿದ್ದು, ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಮೇ 24 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿರುವುದು ವರದಿಯಾಗಿದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments