ಬಳ್ಳಾರಿ: ಶೀಘ್ರದಲ್ಲೇ ನಾಗೇಂದ್ರ ಮಂತ್ರಿಯಾಗ್ತಾರೆ. ಎಸ್‌ಐಟಿ ಈಗಾಗಲೇ ಕ್ಲೀನ್ ಕೊಟ್ಟಿದೆ. ಅವರು ಹದಿನೈದು ದಿನದಲ್ಲಿ ಮಂತ್ರಿಯಾಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ಧಾರೆ..
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಕುರ್ಚಿ ಖಾಲಿಯಿಲ್ಲ. ಸಚಿವ ಸಂಪುಟ ವಿಸ್ತರಣೆ ವಿಚಾರ ಸದ್ಯಕ್ಕಿಲ್ಲ. ನವೆಂಬರ್ ಬಳಿಕ ಸಚಿವ ಸಂಪುಟ ವಿಸ್ತರಣೆ ಆಗಬಹುದು ಎಂದು ಹೇಳಿದರು.
ಇನ್ನು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೂರು ಸ್ಥಳವನ್ನು ಗುರುತಿಸಲಾಗಿದೆ. ಮೂರು ಸ್ಥಳಗಳ ವೀಕ್ಷಣೆ ಮಾಡುತ್ತೇವೆ, ಕಸಾಪ ರಾಜ್ಯಾಧ್ಯಕ್ಷ ಜೋಷಿ ಅವರ ಒಂದಷ್ಟು ವಿವಾದದ ಹಿನ್ನೆಲೆ ಸಮ್ಮೇಳನದ ಸ್ವಾಗತ ಸಮಿತಿ ರಚನೆ ವಿಳಂಬವಾಗಿದೆ. ಮುಂದಿನ ವಾರ ಸಮಿತಿ ರಚನೆಯಾಗುತ್ತದೆದೆ. ಸಾಧ್ಯವಾದಷ್ಟು ಡಿಸೆಂಬರ್ ನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತದೆ ಎಂದು ಜಮೀರ್ ಹೇಳಿದರು.


