ಪ್ರಾಧಿಕಾರದಿಂದ ರಚಿಸಲಾದ ಬಡಾವಣೆಗಳಲ್ಲಿ ತುಂಡು ಭೂಮಿ ಅಥವಾ ಉಳಿದಿರುವ ಭೂಮಿ ವಿಲೇವಾರಿ ಮಾಡುವ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿದೆ. ತಮ್ಮ ನಿವೇಶನ, ಮನೆಗಳಿಗೆ ಹೊಂದಿಕೊಂಡಂತೆ ತುಂಡು ಜಾಗ ಲಭ್ಯವಿದ್ದಲ್ಲಿ ಅಂತಹ ತುಂಡು ಜಾಗವನ್ನು ಮಂಜೂರು ಮಾಡುವ ಸಂಬಂಧ ಆದೇಶಿಸಲಾಗಿದೆ. ಈ ಪ್ರಕಟಣೆ ಹೊರಡಿಸಿದ 15 ದಿನದಲ್ಲಿ ಮೂಡಾಗೆ ಅರ್ಜಿ ಸಲ್ಲಿಸಬೇಕು. ನಂತರ ಸರ್ಕಾರದ ಮಾರ್ಗಸೂಚಿಯಂತೆ ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಲಾಗುವುದು.
ಇನ್ನು ಇತ್ತೀಚೆಗೆ ಮುಡಾದಲ್ಲಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಆಗದೆ ಪರದಾಡುತ್ತಿದ್ದ ಜನರಿಗೆ ರಿಲೀಫ್ ಸಿಕ್ಕಿತ್ತು. ಹಗರಣದಿಂದಾಗಿ ಸಾರ್ವಜನಿಕರ ಕೆಲಸವನ್ನ ಸಂಪೂರ್ಣವಾಗಿ ನಿಲ್ಲಿಸಿದ್ದ ಮುಡಾದಿಂದ ಆ ಕೆಲಸವನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ. ಇನ್ನು ಮುಡಾದಲ್ಲಿ ಆಗುತ್ತಿದ್ದ ಖಾತೆ ಕಂದಾಯ ಎಲ್ಲವೂ ಸ್ಥಳೀಯ ಸಂಸ್ಥೆಗಳಲ್ಲಿ ಆಗಲಿದೆ.
ಖಾತೆ ಕಂದಾಯ ಸೇರಿದಂತೆ ಯಾವುದೇ ಕೆಲಸಗಳು ಆಗುತ್ತಿರಲಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಇದಕ್ಕೆ ಬ್ರೇಕ್ ಹಾಕಿರುವ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಮುಡಾದ ಕೆಲಸವನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಿದ್ದಾರೆ.