ಜಿಲ್ಲೆ

ಶೀಲ ಶಂಕಿಸಿ ಪತ್ನಿಯನ್ನು 12 ವರ್ಷ ಗೃಹ ಬಂಧನದಲ್ಲಿರಿಸಿದ್ದ ಪತಿ ಬಂಧನ

ಮೈಸೂರು ; ಶೀಲ ಶಂಕಿಸಿ ಪತ್ನಿಯನ್ನು 12 ವರ್ಷ ಗೃಹಬಂಧನದಲ್ಲಿರಿಸಿದ್ದ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೆಚ್.ಡಿ‌.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಸಣ್ಣಾಲಯ್ಯ ಎಂಬ ವ್ಯಕ್ತಿ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯನ್ನು 12 ವರ್ಷ ಗೃಹಬಂಧನದಲ್ಲಿಟ್ಟು ಅಮಾನವೀಯ ಕೃತ್ಯ ಎಸಗಿದ್ದನು. ಸದ್ಯ ವಿಷಯ ತಿಳಿಯುತ್ತಿದ್ದಂತೆ 12 ವರ್ಷದಿಂದ ಗೃಹಬಂಧನದಲ್ಲಿದ್ದ ಸುಮಾ ಅವರನ್ನು ಬಿಡುಗಡೆಗೊಳಿಸಿ ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

12 ವರ್ಷದ ಹಿಂದೆ ಸುಮಾಳನ್ನು ಸಣ್ಣಾಲಯ್ಯ 3ನೇ ಮದುವೆಯಾಗಿದ್ದ. ಮದುವೆಯಾದ ದಿನದಿಂದಲೇ ಸಣ್ಣಾಲಯ್ಯನಿಗೆ ತನ್ನ ಪತ್ನಿ ಮೇಲೆ ಅನುಮಾನ ಶುರುವಾಗಿತ್ತು. ಅನುಮಾನದ ಭೂತಕ್ಕೆ ದಾಸನಾಗಿದ್ದ ಸಣ್ಣಾಲಯ್ಯ ಮದುವೆಯಾಗಿ ಒಂದು ವಾರವೂ ಪತ್ನಿ ಜೊತೆ ಸುಖವಾಗಿ ಸಂಸಾರ ಮಾಡಲಿಲ್ಲ. ತನ್ನ ಪತ್ನಿಯ ಶೀಲಶಂಕಿಸಿ ಆಕೆಯನ್ನು ಗೃಹಬಂಧನದಲ್ಲಿಟ್ಟಿದ್ದನು.

ಸದ್ಯ 12 ವರ್ಷಗಳ ಬಳಿಕ ಈಗ ಸುಮಾ ಬಂಧನ ಮುಕ್ತರಾಗಿದ್ದಾರೆ. ಘಟನೆ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತಿ ಸಣ್ಣಾಲಯ್ಯನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button