Freedom tv desk : ಕ್ರಿಸ್ಮಸ್ ಸಂಭ್ರಮ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಸಂಭ್ರಮ ಸಡಗರದಿಂದ ಕ್ರಿಸ್ಮಸ್ ಆಚರಿಸಲಾಯಿತು. ದೀಪಾಲಂಕಾರಗಳಿಂದ ಸೆಂಟ್ ಫಿಲೋಮಿನಾ ಚರ್ಚ್ ಮಿನುಗಿತು.

ನಗರದ ಹಲವೆಡೆ ಇರುವ ಚರ್ಚ್ ಗಳಲ್ಲೂ ವಿಶೇಷ ಪ್ರಾರ್ಥನೆ ಮಾಡಲಾಯಿತು. ನಿನ್ನೆ ರಾತ್ರಿಯಿಂದಲೇ ಶಾಂತಿಧೂತ ಯೇಸುವಿಗೆ ವಿಶೇಷ ಪೂಜೆ ಸಲ್ಲಿಸಿ ಎಲ್ಲಾ ಚರ್ಚ್‌ಗಳಲ್ಲಿಯೂ ವಿಶೇಷ ಪ್ರಾರ್ಥಿಸಲಾಯಿತು. ಯೇಸುವನ್ನು ಪ್ರಾರ್ಥಿಸಿ, ಪರಸ್ಪರ ಕ್ರಿಸ್‌ಮಸ್ ಶುಭಾಶಯ ವಿನಿಮಯ ಮಾಡಿಕೊಂಡರು. ಕ್ಯಾಥೋಲಿಕ್ ಪ್ರಧಾನ ಚರ್ಚ್ ಸೆಂಟ್ ಫಿಲೋಮಿನಾದಲ್ಲಿ ಕ್ರಿಸ್‌ಮಸ್ ಆಚರಣೆ .

ಕರೋಲ್ ಕ್ರೈಸ್ತ ಗೀತೆಗಳನ್ನ ಹಾಡುತ್ತಾ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಮೈಸೂರು ಧರ್ಮಕ್ಷೇತ್ರ ಆಡಳಿತಾಧಿಕಾರಿ ಬರ್ನಾರ್ಡ್ ಮೋರಸ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಕ್ರಿಸ್ಮಸ್ ಜಾಗರಣೆ, ಬಲಿಪೂಜೆ ಸಲ್ಲಿಸಲಾಯಿತು. ರಾತ್ರಿ 12 ಗಂಟೆಗೆ ಬಾಲ ಯೇಸುವನ್ನು ಮೆರವಣಿಗೆ ಮೂಲಕ ಗೋದಲಿಯಲ್ಲಿ ಪ್ರತಿಷ್ಠಾಪಿಸಿ
ಗೋದಲಿ ಪ್ರದರ್ಶನವನ್ನು ಸಹಸ್ರಾರು ಜನರು ಕಣ್ತುಂಬಿಕೊಂಡರು.