ಹುಬ್ಬಳ್ಳಿ : ನನ್ನ ಅಳಿಯ ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿದ್ದಾನೆ. ರಜತ ತಂದೆಯನ್ನು ಕಳೆದುಕೊಂಡ ಅನಾಥ ಮಗ. ಅಧಿಕಾರ ಇಲ್ಲದಿದ್ದರೂ ಸೇವೆ ಮಾಡುತ್ತಾ ಬಂದಿದ್ದಾನೆ, ಅದು ಶ್ಲಾಘನೀಯ. ಎಲ್ಲರ ಆರ್ಶೀವಾದ ನನ್ನ ಅಳಿಯನ ಮೇಲೆ ಇರಲಿ‌ಎಂದು ಸಚಿವೆ ಹೆಬ್ಬಾಳ್ಳರ್ ಬಾವುಕ ಮಾತುಗಳನ್ನಾಡಿದ್ದರು‌.

ಹುಬ್ಬಳ್ಳಿಯ ಗಿರಣಿಚಾಳದಲ್ಲಿ ನಡೆದ ರಜತ್ ಸಂಭ್ರಮ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಜತ್‌ನ ಗೆಳೆಯರ ಬಳಗಕ್ಕೆ ನಾನು ಮನಸೋತಿದ್ದೇನೆ. ಇವತ್ತು ಅಳಿಯನ ಜನ್ಮದಿನ.‌ ಆದ್ರೆ ಕಾಕತಾಳಿಯನೋ ಏನೋ ಇವತ್ತು ನನ್ನ ಜನ್ಮ ದಿನಾಚರಣೆ ಇದೆ. ಬೆಂಗಳೂರಿನಲ್ಲಿ ಬಜೆಟ್ ಅಧಿವೇಶನ ಇದೆ.‌ ಆದ್ರೆ ಅಳಿಯನಿಗಾಗಿ ಇಲ್ಲಿಗೆ ಬಂದಿದ್ದೇನೆ.

ರಜತ್ ಲಕ್ಷ್ಮೀ ಹೆಬ್ಬಾಳ್ಳರ ಅಳಿಯ ಅಂತಾ ಹೇಳತಾರೆ. ಹಾಗಾಗಿ ರಾಜಕಾರಣದಲ್ಲಿ ಇದ್ದಾರೆ ಎಂದು ಬಹುತೇಕರು ಹೇಳ್ತಾರೆ. ಆದ್ರೆ ರಜತ್ ನನ್ನ ಮಗಳ ಮದುವೆ ಆಗುವುದಕ್ಕಿಂತ ಮೊದಲೇ ರಾಜಕಾರಣದಲ್ಲಿ ಇದ್ದವರು. ಬಹುಶಃ ಅವನು ನನ್ನ ಅಳಿಯಾ ಆಗಿರೋದ್ರಿಂದ ರಾಜಕಾರಣದಲ್ಲಿ ಹಿಂದೆ ಇದ್ದಾರೆ.

ರಜತ್ ಶೆಟ್ಟರಗಾಗಿ ಟಿಕೆಟ್‌ ತ್ಯಾಗ ಮಾಡಿದವರು. ಇವತ್ತು ಮತ್ತೆ ಕನಸು ಕಂಡಿದ್ದಾನೆ. ಆದ್ರೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಪರೋಕ್ಷವಾಗಿ ರಜತ್‌ ಲೋಕಸಭೆ ಅಭ್ಯರ್ಥಿ ಎಂದು ಹೇಳುವ ಮೂಲಕ, ಅಳಿಯನಿಗೆ ಎಲ್ಲರೂ ಆರ್ಶೀವಾದ ಮಾಡುವಂತೆ ಮನವಿ ಮಾಡಿದರು .

 

By admin

Leave a Reply

Your email address will not be published. Required fields are marked *

Verified by MonsterInsights