MVA SEAT SHARE: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಗೆ 18 ಸ್ಥಾನ ಹಂಚಿಕೆ?

ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ವಿರೋಧಪಕ್ಷಗಳ ಕೂಟ ಮಹಾವಿಕಾಸ್ ಅಘಡಿ (MVA)ಯಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ.
ಒಟ್ಟು 48 ಲೋಕಸಭೆ ಕ್ಷೇತ್ರಗಳ ಪೈಕಿ 20ರಲ್ಲಿ ಉದ್ಧವ್ ಠಾಕ್ರೆಯ ಯುಬಿಟಿ(UBT), 18ರಲ್ಲಿ ಕಾಂಗ್ರೆಸ್(CONGRESS), ಶರದ್ ಪವಾರ್ ಎನ್ಸಿಪಿ (Sharad pawar NCP) 10 ಕಡೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಎಂವಿಎಯಲ್ಲಿ ಮಾತುಕತೆ ಆಗಿದೆ. ಅಧಿಕೃತ ಪ್ರಕಟಣೆಯಷ್ಟೇ ಹೊರಬೀಳಬೇಕಿದೆ.
ಈ ಮೂರು ವಿರೋಧ ಪಕ್ಷಗಳ ಮಧ್ಯೆ ಸೀಟು ಹಂಚಿಕೆ ಸಂಬಂಧ ಕೆಲ ದಿನಗಳಿಂದ ಚರ್ಚೆಗಳು ನಡೆಯುತ್ತಿದ್ದವು. 8 ಸೀಟುಗಳ ವಿಷಯದಲ್ಲಿ ಏರ್ಪಟ್ಟಿದ್ದ ಅನಿಶ್ಚಿತತೆ ಇದೀಗ ನಿವಾರಣೆ ಆಗಿದೆ ಎಂದು ಎಂವಿಎ ಮೂಲಗಳು ತಿಳಿಸಿವೆ.
ಮುಂಬೈನ ಆರು ಕ್ಷೇತ್ರಗಳಲ್ಲಿ ನಾಲ್ಕು ಕಡೆ ಯುಬಿಟಿ ಸ್ಪರ್ಧಿಸಲಿದೆ ಎಂದು ಹೇಳಲಾಗಿದೆ.
ಎಂವಿಎ ಮಿತ್ರ ಪಕ್ಷವಾದ ಬಹುಜನ್ ವಂಚಿತ್ ಅಘಡಿ (BVA) ಎರಡು ಕಡೆ ಸ್ಪರ್ಧಿಸಲಿದೆ. ಯುಬಿಟಿ ಪಾಲಿನ ಕ್ಷೇತ್ರಗಳ ಪೈಕಿ ಎರಡರಲ್ಲಿ ಬಹುಜನ್ ವಂಚಿತ್ ಅಘಡಿ ಪಕ್ಷ ಕಣಕ್ಕೆ ಇಳಿಯಲಿದೆ. ಶರದ್ ಪವಾರ್ ಎನ್ಸಿಪಿ ತಮ್ಮ ಪಾಲಿನ 10 ಸ್ಥಾನಗಳ ಪೈಕಿ ಒಂದನ್ನು ಪಕ್ಷೇತರ ಅಭ್ಯರ್ಥಿಗೆ ಬಿಟ್ಟು ಕೊಡಲಿದೆ ಎಂದು ಹೇಳಲಾಗುತ್ತಿದೆ.



