
ಹೊಸದಿಲ್ಲಿ: ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಅಪಘಾತದ ಸಮಯದಲ್ಲಿ ಮುಶೀರ್ ಖಾನ್ ಜೊತೆ ಅವರ ತಂದೆ ನೌಶಾದ್ ಖಾನ್ ಸಹ ಇದ್ದರು. ಇರಾನಿ ಕಪ್ಗಾಗಿ ಕಾನ್ಪುರದಿಂದ ಲಖನೌಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
ರಸ್ತೆ ಅಪಘಾತದಲ್ಲಿ ಮುಶೀರ್ ಖಾನ್ ಅವರ ಮೂಳೆ ಮುರಿದಿದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ ಒಂದರಂದು ಲಖನೌದಲ್ಲಿ ಇರಾನಿ ಕಪ್ ಪಂದ್ಯ ಆರಂಭವಾಗಲಿದೆ. ರೆಸ್ಟ್ ಆಫ್ ಇಂಡಿಯಾ, ರಣಜಿ ಟ್ರೋಫಿ ವಿಜೇತ ಮುಂಬೈ ತಂಡವನ್ನು ಎದುರಿಸಲಿದೆ. ಮುಂಬೈ ತಂಡದ ಪ್ರಮುಖ ಆಟಗಾರ 19ರ ಹರೆಯದ ಮುಶೀರ್ ಖಾನ್ ಇರಾನಿ ಕಪ್ಗೆ ಸಜ್ಜಾಗಿದ್ದಾರೆ. ಆದರೆ ಲಖನೌಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
Musheer Khan suffers a fracture in a road accident in UP. He’s set to miss the Irani Cup and the initial phase of the Ranji trophy. (TOI).
– Wishing Musheer a speedy recovery! pic.twitter.com/lZaLJmjniC
— Mufaddal Vohra (@mufaddal_vohra) September 28, 2024




