ಜಿಲ್ಲೆರಾಜಕೀಯರಾಜ್ಯ

ಚಿತ್ರದುರ್ಗದಲ್ಲಿ ನೆಡಿದಿದ್ದ ಕೊಲೆ ಆರೋಪಿಗಳಿಗೆ ಆರು ವರ್ಷ ಶಿಕ್ಷೆ!

ಚಿತ್ರದುರ್ಗ : ಮನೆಯ ಜಾಗದ ವಿಚಾರದಲ್ಲಿ ಕೋಪಗೊಂಡು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಮತ್ತೊಬ್ಬ ವ್ಯಕ್ತಿ ತೀವ್ರ ಹಲ್ಲೆ ನಡೆಸಿದ್ದ ಇಬ್ಬರು ಅಪರಾಧಿಗಳಿಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಮೊಳಕಾಲ್ಮೂರು ತಾಲೂಕಿನ ಹೊಸಹಳ್ಳಿ ಗ್ರಾಮದ ಗವಿಸಿದ್ದಪ್ಪ ಹಾಗೂ ಕರಿಚಿತ್ತಪ್ಪ ಶಿಕ್ಷೆಗೆ ಗುರಿಯಾದವರು. ಗಾಯಾಳು ಎಳ್ಳು ಕೃಷ್ಣಪ್ಪ ಅವರಿಗೆ ಒಂದು ಲಕ್ಷ ಹಾಗೂ ಎಳ್ಳು ನಾಗಪ್ಪ ಅವರಿಗೆ 50,000 ಪರಿಹಾರ ನೀಡಲು ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ ಕೆ ಗೀತಾ ಆದೇಶದಲ್ಲಿ ಸೂಚಿಸಿದ್ದಾರೆ.

ಗವಿಸಿದ್ದಪ್ಪ ಕರಿಸಿದ್ದಪ್ಪ ಹಾಗೂ ಎಳ್ಳು ನಾಗಪ್ಪ ಕುಟುಂಬಕ್ಕೆ ಜಾಗದ ವಿಚಾರದಲ್ಲಿ ವಿವಾದವಿತ್ತು. ಜಾಗದ ವಿವಾದಕ್ಕೆ ಸಂಬಂಧಪಟ್ಟಂತೆ ಹಲವು ಬಾರಿ ಗಲಾಟೆ ಕೂಡ ನಡೆದಿತ್ತು. ಅಲ್ಲದೇ ಇದೇ ಜಾಗದ ವಿಚಾರ ಕುರಿತು ಎಳ್ಳು ನಾಗಪ್ಪ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಎಳ್ಳು ನಾಗಪ್ಪ ನ್ಯಾಯಾಲಯದ ಮೆಟ್ಟಿಲು ಏರುತ್ತಲೇ ಆರೋಪಿಗಳು ಆತನ ಮೇಲೆ ಈ ಇಬ್ಬರು ಆರೋಪಿಗಳು 2019 ರ ಮೇ 7ರಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ನಾಗಪ್ಪ ಮತ್ತು ಕೃಷ್ಣಪ್ಪ ಪೈಕಿ ಕೃಷ್ಣಪ್ಪ ಗಂಭೀರ ಗಾಯಗೊಂಡು ಮೃತಪಟ್ಟಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಗವಿಸಿದ್ದಪ್ಪ ಹಾಗೂ ಕರಿಚಿತ್ತಪ್ಪರನ್ನ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಧಾನ ಸರಕಾರಿ ವಕೀಲ ಗಣೇಶ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

Comments (0)

Your email address will not be published. Required fields are marked *

Back to top button