Freedom TV

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆ ಸ್ಪಷ್ಟನೆ

ಸುಬ್ರಹ್ಮಣ್ಯ:  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ರಿಶ್ಚಿಯನ್ ಧರ್ಮದ ಆಡಳಿತಾಧಿಕಾರಿ ನೇಮಕ ಆರೋಪಕ್ಕೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆ ಸ್ಷಷ್ಟನೆ ನೀಡಿದೆ .

ಆಡಳಿತಾಧಿಕಾರಿ ಯೇಸುರಾಜ್ ನೇಮಕ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಶ್ಚಿಯನ್ ಅಧಿಕಾರಿ ನೇಮಕದಿಂದ ಕುಕ್ಕೆ ಪಾವಿತ್ರ್ಯತೆ ಧಕ್ಕೆ ಎಂದು ಸುಳ್ಳು ಸುದ್ದಿ ಹರಿಬಿಡಲಾಗಿತ್ತು . ಈ ಕುರಿತು ಬಿಜೆಪಿ ಕೂಡ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿತ್ತು.

ಈ ಹಿನ್ನಲೆಯಲ್ಲಿ ಯೇಸುರಾಜ್ ಅವರು ಹಿಂಧೂ ಧರ್ಮಕ್ಕೆ ಸೇರಿದ್ದಾರೆ. ಇಂದು ಮುಜರಾಯಿ ಇಲಾಖೆಯ ಆಯುಕ್ತರು ಲಿಖಿತ ಸ್ಪಷ್ಟನೆ ನೀಡಿದ್ದಾರೆ..ಇದೇ ವೇಳೆ ರಾಮಲಿಂಗಾರೆಡ್ಡಿ ಅವರು ಯೇಸುರಾಜ್ ಅವರು ಪರಿಶಿಷ್ಟ ಜನಾಂಗದವರಾಗಿದ್ದು,ಬಿಜೆಪಿ ಮನುವಾದಿಗಳಿಗೆ ಇದು ಸಹಿಸಲಾಗುತ್ತಿಲ್ಲ ಎಂದು ಕುಟುಕಿದ್ದಾರೆ …ಪರಿಶಿಷ್ಟ ಜನಾಂಗಕ್ಕೆ ಸೇರಿದ ಯೇಸುರಾಜ್ ಅವರ ಕುರಿತು ಸುಳ್ಳು ಸುದ್ದಿ ಹರಡಿಸಿ ಬಿಜೆಪಿ ವಿವಾದ ಸೃಷ್ಟಿಸುತ್ತಿದೆ ಎಂದು ಮುಜುರಾಯಿ ಸಚಿವ  ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button