ಬೆಂಗಳೂರು: ಮುಡಾ ನಿವೇಶನಗಳನ್ನು ಅಕ್ರಮವಾಗಿ ಪಡೆದ ಆರೋಪದಲ್ಲಿ ಲೋಕಾಯುಕ್ತದಿಂದ ವಿಚಾರಣೆ ಎದುರಿಸಿದರು, ಆದರೆ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಲೋಕಾಯುಕ್ತ ಬಳಿಕ ಈಗ ಇ.ಡಿ ವಿಚಾರಣೆಯ ಭೀತಿ ಸಿದ್ದರಾಮಯ್ಯಗೆ ಶುರುವಾಗಿದೆ. ಸಿದ್ದರಾಮಯ್ಯ ಇಬ್ಬರು ಅತ್ಯಾಪ್ತರಿಗೆ ಇ.ಡಿಯಿಂದ ಸಮನ್ಸ್ ನೀಡಲಾಗಿದೆ. ಮುಡಾ ಮಾಜಿ ಅಧ್ಯಕ್ಷ ಮರಿಗೌಡ ಸೇರಿ 7 ಮಂದಿಗೆ ಇ.ಡಿ ಸಮನ್ಸ್ ಕೊಟ್ಟಿದೆ.
ತುರ್ತು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಮುಡಾ ಮಾಜಿ ಆಯುಕ್ತ ದಿನೇಶ್, ನಟೇಶ್‌ಗೂ ಮತ್ತೆ ಸಮನ್ಸ್ ನೀಡಿದೆ. ಇವರೆಲ್ಲರ ವಿಚಾರಣೆ ಬಳಿಕ ಸಿಎಂಗೆ ಇ.ಡಿ ನೋಟಿಸ್ ನೀಡುವ ಸಾಧ್ಯತೆ ಇದೆ. ಲೋಕಾಯುಕ್ತ ಬಳಿಕ ಸಿಎಂಗೆ ಇ.ಡಿ ವಿಚಾರಣೆ ಭೀತಿ ಶುರುವಾಗಿದೆ.
ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್‌ಗೂ ಸಂಕಷ್ಟ ಎದುರಾಗಿದೆ. ಲೋಕಾಯುಕ್ತ ಎಸ್ಪಿ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿಚಾರಣೆಯಲ್ಲಿ ಹಲವು ಲೋಪ ಆಗಿದೆ. ಲೋಕಾಯುಕ್ತ ಎಸ್ಪಿ ಉದೇಶ್ ಕರ್ತವ್ಯಲೋಪ ಎಸಗಿದ್ದಾರೆ. ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ನೀಡಿದ ದೂರಿನಲ್ಲಿ ಉದೇಶ್ ಅವರಿಗೆ ಎಚ್ಚರಿಕೆ ನೀಡಬೇಕೆಂದು ಉಲ್ಲೇಖಿಸಲಾಗಿದೆ.
ಮುಡಾ ಕೇಸ್‌ನ ಆರೋಪಿಗಳಾದ ಪಾರ್ವತಿ ಸಿದ್ದರಾಮಯ್ಯ, ಸಿಎಂ ಸಿದ್ದರಾಮಯ್ಯ ಬಾಮೈದ, ಜಮೀನು ಮಾರಿದ್ದ ದೇವರಾಜ್ ಅವರ ವಿಚಾರಣೆಯನ್ನು ಲೋಕಾಯುಕ್ತ ಈಗಾಗಲೇ ನಡೆಸಿತ್ತು. ಪ್ರಕರಣದ ಎ1 ಆರೋಪಿಯಾದ ಸಿಎಂ ಸಿದ್ದರಾಮಯ್ಯ ಅವರನ್ನು ಬುಧವಾರ ಮೈಸೂರಿನ ಕಚೇರಿಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದರು. ಸುಮಾರು 2 ಗಂಟೆಗಳ ಕಾಲ 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸಿಎಂಗೆ ಕೇಳಲಾಯಿತು.