ನವದೆಹಲಿ: ಇತ್ತೀಚಿಗಷ್ಟೇ ಗಾಯಕಿ ಶಿವಶ್ರೀ ಜೊತೆ ಮದುವೆಯಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಪ್ರಧಾನಿ ಮೋದಿ ಭೇಟಿ ಬಳಿಕ ಎಕ್ಸ್ನಲ್ಲಿ ಫೋಟೊ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ, ನಾನು ಮತ್ತು ಶಿವಶ್ರೀ ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ ಪಡೆದುಕೊಂಡೆವು. ಅವರು ಎಂದಿನಂತೆ ಪ್ರೀತಿಯಿಂದ ನಮ್ಮನ್ನು ಹರಿಸಿ, ಆಶೀರ್ವಾದಿಸಿದರು. ಇದೇ ವೇಳೆ ನಮ್ಮ ಮದುವೆ ಫೋಟೋಗಳನ್ನು ವೀಕ್ಷಿಸಿದ್ದಾಗಿ ಹೇಳಿದಾಗ ಅಚ್ಚರಿಯೂ ಆಯಿತು ಎಂದಿದ್ದಾರೆ.
ಇನ್ನು ಭೇಟಿ ವೇಳೆ ಸಂಸದ ತೇಜಸ್ವಿ ಸೂರ್ಯ ಪ್ರಧಾನಿ ಮೋದಿ ಅವರಿಗೆ ಶ್ರೀ ಮಧ್ವಾಚಾರ್ಯರು ರಚಿಸಿದ 750 ವರ್ಷಗಳಷ್ಟು ಹಳೆಯ ಮೂಲದ ಗ್ರಂಥದ ಹಸ್ತಪ್ರತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.



