ಮಂಗಳೂರು : ಕೆಲವು ಡೀಸೆಲ್ ಟ್ಯಾಂಕರ್ ಗಳಲ್ಲಿ ನೀರು ಮಿಶ್ರಿತ ಇಂಧನ ಇದು ದೇವನಗುಂದಿ ಟರ್ಮಿನಲ್ ನಲ್ಲಿ ನಡೆದ ಯಡವಟ್ಟು ಪೈಪ್ ಲೈನ್ ಗಳಲ್ಲಿ ಬಂದ ಇಂಧನ ಸಂಗ್ರಹಿಸುವ ವಿಧಾನದಲ್ಲಿ ಏರುಪೇರು ವಾಟರ್ ಲೆವಲ್ ಕಡಿಮೆಯಾಗೋವರೆಗೂ ಕಾಯದೆ ಸಿಬ್ಬಂದಿ ಯಡವಟ್ಟು ಇಂಧನ ಸಂಗ್ರಹವಾಗುವ ಟ್ಯಾಂಕ್ ಗಳಲ್ಲಿರುವ ನೀರು ಇಂಗಿಸದೆ ಇಂಧನ ಭರ್ತಿ 20 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ಗಳಲ್ಲಿ 150-200 ಲೀಟರ್ ನೀರು ಪೆಟ್ರೋಲ್ ಬಂಕ್ ಗಳಲ್ಲಿ ಡಂಪ್ ಮಾಡಲಾಗ್ತಿರುವ ಇಂಧನದಲ್ಲಿ ನೀರು ನೀರು ಮಿಶ್ರಿತ ಇಂಧನ ಹಾಕಿಸಿಕೊಳ್ಳಲು ಬಂಕ್ ಮಾಲೀಕರ ನಿರಾಕರಣೆ ಎಚ್ ಪಿಸಿಎಲ್ ಕಂಪೆನಿ ಕ್ರಮಕ್ಕೆ ಬಂಕ್ ಮಾಲೀಕರು ಕೆಂಡಾಮಂಡಲ.
ಮಂಗಳೂರಿನಿಂದ ಪೈಪ್ ಲೈನ್ ಗಳಲ್ಲಿ ಟರ್ಮಿನಲ್ ಗೆ ಬರುವ ಇಂಧನ( ಪೆಟ್ರೋಲ್-ಡೀಸೆಲ್ )ವನ್ನು ದೇವನಗುಂದಿ ಟರ್ಮಿನಲ್ ನ ದೊಡ್ಡ ದೊಡ್ಡ ಟ್ಯಾಂಕ್ ಗಳಿಗೆ ಡಂಪ್ ಮಾಡಲಾಗುತ್ತದೆ.ಡಂಪ್ ಮಾಡುವ ವೇಳೆ ಇಂತಿಷ್ಟು ಪ್ರಮಾಣದ ನೀರಿನ ಸಂಗ್ರಹವಾಗಿರುತ್ತೆ.ಹಾಗೆ ಬಂದ ಇಂಧನ ನೀರಿನೊಂದಿಗೆ ಬರೆಯುತ್ತದೆ.ಹಾಗಂತ ಇದು ನೀರಿನ ಜತೆ ಇಂಧನದ ಕಲಬೆರಕೆಯಲ್ಲ.ಇಂಧನದ ಸಾಂದ್ರತೆ ಬ್ಯಾಲೆನ್ಸ್ ಮಾಡಲು ಹೀಗೆ ಮಾಡಲೇಬೇಕು.ಹಾಗೆ ಮಿಶ್ರಣವಾದ ನೀರು ಹಾಗೂ ಇಂಧನ ಕ್ರಮೇಣ ಬೇರ್ಪಡುತ್ತದೆ.ಅಂದರೆ ಕನಿಷ್ಟ 6- 8 ಗಂಟೆವರೆಗೆ ನೀರು ಕೆಳ ಮಟ್ಟಕ್ಕೂ ಇಂಧನ ಮೇಲ್ಮಟ್ಟಕ್ಕೂ ಬರುವವರೆಗೂ ಕಾಯಬೇಕಾಗುತ್ತೆ.ಅದನ್ನು ದೃಢಪಡಿಸಿಕೊಂಡ ನಂತರವೇ ಇಂಧನವನ್ನು ಲಾರಿಗಳಿಗೆ ಭರ್ತಿ ಮಾಡಬೇಕಿರುತ್ತದೆ.ಆದ್ರೆ ಕಳೆದ ನಾಲ್ಕೈದು ದಿನಗಳಿಂದ ಸಿಬ್ಬಂದಿ ಯಡವಟ್ಟಿನಿಂದ ಇಂಧನ ಪೈಪ್ ಲೈನ್ ಗಳಲ್ಲಿ ಬಂದು ಟ್ಯಾಂಕರ್ ಗಳಲ್ಲಿ ಸಂಗ್ರಹವಾಗ್ತಿದ್ದಂಗೆ ಕಾಯುವ ತಾಳ್ಮೆ ಇಲ್ಲದೆ ಅದನ್ನು ಲಾರಿಗಳಿಗೆ ಭರ್ತಿ ಮಾಡಿ ಕಳುಹಿಸಲಾಗುತ್ತಿದೆ.