ಕ್ರೈಂ ಸ್ಟೋರಿಜಿಲ್ಲೆಸುದ್ದಿ

ಹಣದಾಸೆಗೆ ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ತಾಯಿ..!

ಬೆಂಗಳೂರು: ತಾಯಿಯನ್ನ ದೇವರೆಂದು ಪೂಜಿಸುವ ನಾಡಿನಲ್ಲಿ ಹೆತ್ತ ಮಗಳನ್ನೇ ಕಾಮದ ಹಸಿವಿಗೆ ಆಹುತಿ ಕೊಟ್ಟ ಅಮಾನವೀಯ ಘಟನೆ ನಡೆದಿದೆ. ತನ್ನ ಮಗಳು ಬೆಳೆದು ದೊಡ್ಡವಳಾಗಿ ಸಮಾಜದಲ್ಲಿ ಗೌರವದಿಂದ ಬಾಳಲಿ ಎಂದು ಹಾರೈಸಬೇಕಾದ ತಾಯಿಯೇ, ಮಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾಳೆ. ಹಣದ ಆಸೆಗೆ ತನ್ನ ಸ್ವಂತ 15 ವರ್ಷದ ಮಗಳನ್ನೇ ಕಾಮದ ಕೂಪಕ್ಕೆ ದೂಡಿದ್ದಾಳೆ. ಬೆಂಗಳೂರಿನ ವಿಜಯನಗರದ ಚಂದ್ರಾ ಲೇಔಟ್ ವ್ಯಾಪ್ತಿಯಲ್ಲಿ ಅಮಾನವೀಯ ಕೃತ್ಯ ನಡೆದಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ.

ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ್ದ ತಾಯಿ, ಆಕೆಯ ಮಲತಂದೆ ಹಾಗೂ ಪಿಂಪ್ ವಾಣಿ ಎಂಬಾಕೆಯನ್ನ ಬಂಧಿಸಿ ಕಂಬಿ ಹಿಂದೆ ದೂಡಿದ್ದಾರೆ. ಬಂಧಿತ ತಾಯಿ ಮತ್ತು ಮಲತಂದೆ ಪ್ರತಿದಿನ ಕಾರಿನಲ್ಲಿ ಬಾಲಕಿಯನ್ನು ಪಿಂಪ್ ವಾಣಿ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರು. ಅಲ್ಲಿ ಬಾಲಕಿ ಸಂಜೆವರೆಗೂ ಗ್ರಾಹಕರ ಕಿರುಕುಳಕ್ಕೆ ಬಲಿಯಾಗುತ್ತಿದ್ದಳು. ಬಾಲಕಿ ಜೊತೆ ಮಂಚ ಹತ್ತಲು ಪಿಂಪ್ ವಾಣಿ 6 ರಿಂದ 10 ಸಾವಿರ ರೂಪಾಯಿ ಹಣ ನಿಗದಿಪಡಿಸುತ್ತಿದ್ದಳು. ಇದರಲ್ಲಿ ಅರ್ಧದಷ್ಟು ಹಣವನ್ನು ತಾಯಿಗೆ ನೀಡಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಪೊಲೀಸರ ತನಿಖೆ ವೇಳೆ ಬಹಿರಂಗಗೊಂಡಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಚಂದ್ರಾಲೇಔಟ್ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದು, ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Comments (0)

Your email address will not be published. Required fields are marked *

Back to top button