Wednesday, January 28, 2026
20.2 C
Bengaluru
Google search engine
LIVE
ಮನೆರಾಜ್ಯಬೆಂಗಳೂರು ಎಸಿಯಿಂದ 100ಕ್ಕೂ ಅಧಿಕ ಬೋಗಸ್ ಆರ್ಡರ್ - ತಲೆದಂಡದ ಭೀತಿ

ಬೆಂಗಳೂರು ಎಸಿಯಿಂದ 100ಕ್ಕೂ ಅಧಿಕ ಬೋಗಸ್ ಆರ್ಡರ್ – ತಲೆದಂಡದ ಭೀತಿ

ಬೆಂಗಳೂರು ಎಸಿಯೊಬ್ಬರು ಭೂಗಳ್ಳರ ಜೊತೆ ಸೇರಿ ಎಸಗಿರುವ ಮಹಾಪ್ರಮಾದ ಬಟಾಬಯಲಾಗಿದೆ ನಿರಂತರ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಇವರು ಮಾಡಿದ್ದ ಆದೇಶಗಳ ತನಿಖೆ ಮಾಡಿತ್ತು. ಇವರು ಮಾಡಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಮೊದಲ ತನಿಖೆಯಲ್ಲಿ 53 ದೋಷಪೂರಿತ ಆದೇಶಗಳು ಹೊರಬಿದ್ದಿವೆ. ಆನೇಕಲ್ ಭಾಗದಲ್ಲೇ 18 ಕಡತಗಳಲ್ಲಿ ಲೋಪದೋಷಗಳು ಕಂಡುಬಂದಿವೆ. ಉಳಿದ ತಾಲೂಕಲ್ಲೂ ಬಹಳಷ್ಟು ಯಡವಟ್ಟುಗಳು ನಡೆದಿವೆ. ರೆವೆನ್ಯೂ ಕಮಿಷನರ್ ಪತ್ತೆ ಹಚ್ಚಿರುವ ಈ ಹಗರಣದಲ್ಲಿ 53 ಏಕಪಕ್ಷೀಯ ಆದೇಶಗಳು ಬೆಳಕಿಗೆ ಬಂದಿವೆ. ಕೂಡಲೇ ಎಸಿ ಮೇಲೆ ಎಫ್​​ಐಆರ್ ದಾಖಲಿಸಿ ಡಿಸಿಗೆ ವರದಿ ನೀಡಲು ಸರ್ಕಾರದಿಂದ ಸೂಚನೆ ಬಂದಿದೆ. ಆನೇಕಲ್ ಭಾಗದ ರೈತ ಸಂಘಗಳು, ದಲಿತ ಸಂಘಟನೆಗಳು ಕೆಆರ್ಎಸ್ ಪಕ್ಷ ಸದರಿ ಎಸಿಯ ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಹೋರಾಟ ನಡೆಸಿದ್ದವು. ವಕೀಲ ಸಂಘಟನೆಗಳು ಬಹಿರಂಗವಾಗಿ ಸಮರ ಸಾರಿದ್ದವು ಇಡೀ ಕಚೇರಿಯ ಸಿಬ್ಬಂದಿಗಳನ್ನ ವಸೂಲಾತಿಗೆ ಬಳಸಿ ಹಗರಣ ಎಸಗಿದ್ದ ಆರೋಪ ಎಸಿ ಮೇಲಿತ್ತು.

ರೀಜನಲ್ ಕಮಿಷನರ್ ಅವರು ಈ ಕುರಿತು ಹಲವು ಭಾರಿ ಎಚ್ಚರಿಕೆ ನೀಡಿದ್ದರು. ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದ ಈ ಎಸಿ ಪ್ರಭಾವಿ ರಾಜಕಾರಣಿಯೊಬ್ಬರ ಕೃಪಾಕಟಾಕ್ಷ ಹೊಂದಿದ್ದು ಎಫ್​ಐಆರ್ ತಪ್ಪಿಸಿಕೊಳ್ಳಲು ಹಾಗೂ ಅರೆಸ್ಟ್ ಆಗಿ ಜೈಲು ಸೇರುವುದನ್ನ ತಡೆಯಲು ಇಂದು ಮಧ್ಯಾಹ್ನದಿಂದ ಭಾರಿ ಪ್ರಯತ್ನ ಮಾಡುತ್ತಿರುವ ವಿಚಾರ ಫ್ರೀಡಂ ಟಿವಿ ಗಮನಕ್ಕೆ ಬಂದಿದೆ. ಅಧಿಕಾರಿ ವಲಯದಲ್ಲಿ ಸದರಿ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದೆ. ನಾಳೆ ಏನಾಗಬಹುದು ಎನ್ನುವ ಚರ್ಚೆ ಶುರುವಾಗಿದೆ. ನಾಳೆ ಏನಾಗಬಹುದು ಇವರನ್ನು ಯಾರು ಕಾಪಾಡಬಹುದು ಎನ್ನುವ ಬಗ್ಗೆ ಅಧಿಕಾರ ವಲಯದಲ್ಲಿ ಚರ್ಚೆ ಶುರುವಾಗಿದೆ..

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments