Freedom TV

ರಾಜ್ಯದಲ್ಲಿ ಆತಂಕ ಸೃಷ್ಟಿಸಿದ ಮಂಗನ ಕಾಯಿಲೆ…!

ಬೆಂಗಳೂರು : ರಾಜ್ಯದಲ್ಲಿ ಈ ಹಿಂದೆ ಜನರನ್ನು ಪೀಡಿಸಿ ಮರೆಯಾಗಿದ್ದ ಮಂಗನ ಕಾಯಿಲೆ ಮತ್ತೆ ಮಲೆನಾಡು ಭಾಗದಲ್ಲಿ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ.

ರಾಜ್ಯದಲ್ಲಿ ಒಟ್ಟು ಸಕ್ರಿಯ 37 ಕ್ಯಾಸನೂರು ಫಾರೆಸ್ಟ್ ಡಿಸಿಸ್ ಕಾಣಿಸಿಕೊಂಡಿದ್ದು, ಕಳೆದ ಒಂದು ತಿಂಗಳಲ್ಲಿ 2413 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇನ್ನು ಈ ಪರೀಕ್ಷೆಯಲ್ಲಿ ಒಟ್ಟು 65 ಮಂದಿಗೆ ಮಂಗನ ಕಾಯಿಲೆ ದೃಢ ಪಟ್ಟಿದ್ದು, ಕಳೆದ 24 ಗಂಟೆಯಲ್ಲಿ 3 ಮಂದಿಗೆ ಪರೀಕ್ಷೆ, ಒಬ್ಬರಿಗೆ ಸೋಂಕು ದೃಢ ಪಟ್ಟಿದೆ. ಇನ್ನು, ಕಾಯಿಲೆಯ ತೀವ್ರತೆಗೆ ಇಲ್ಲಿವರೆಗೂ ಇಬ್ಬರು ಸಾವನ್ನಪ್ಪಿದ್ದು, ಮಂಗನ ಕಾಯಿಲೆಯನ್ನು ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

Comments (0)

Your email address will not be published. Required fields are marked *

Back to top button