ಚಿತ್ರದುರ್ಗ : ಹಣ ದ್ವಿಗುಣ ಮಾಡಿ ಕೊಡುವುದಾಗಿ ನಂಬಿಸಿ ಬರೋಬ್ಬರಿ 4.79 ಕೋಟಿ ಹಣ ವಂಚಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ವಂಚಕನನ್ನು ಆಂಧ್ರ ಮೂಲದ ಕೋಡೆ ರಮಣಯ್ಯ ಎಂದು ಗುರುತಿಸಲಾಗಿದೆ. ರೈಲ್ವೇ ಸಿಬ್ಬಂದಿಗಳು ಹಾಗೂ ಸಂಬಂಧಿಕರಿಗೆ 4.79 ಕೋಟಿ ಹಣ ಪಂಗನಾಮ ಇಟ್ಟು ಆತ ವಿದೇಶಕ್ಕೆ ಹಾರಿದ್ದಾನೆ.
ಹೊಳಲ್ಕೆರೆಯ ಚಿಕ್ಕಜಾಜೂರು ರೈಲ್ವೇ ಜಂಕ್ಷನ್ ನಲ್ಲಿಕೆಲಸ ಮಾಡುತ್ತಿದ್ದ 106 ಮಂದಿ ನೌಕರರು ಈತನ ಮೋಸದ ಬಲೆಗೆ ಬಿದ್ದು, ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರವೈಟ್ ಲಿಮಿಟೆಡ್ ಕಂಪನಿ ಹೆಸರಲ್ಲಿ ವಂಚಿಸಿದ್ದು, 60 ದಿನಗಳಲ್ಲಿ ಹಣ ದ್ವಿಗುಣ ಮಾಡಿಕೊಡುವುದಾಗಿ ವಂಚಿಸಿದ್ದಾನೆ.
ಕರ್ನಾಟಕ ಹಾಗೂ ರಾಜಸ್ಥಾನ ಸೇರಿ ಕೆಲ ರಾಜ್ಯಗಳಲ್ಲಿ ವಂಚಿಸಿರುವ ಆರೋಪವಿದ್ದು,ರೈಲ್ವೆ ನೌಕರರು ಹೊರಗುತ್ತಿಗೆ ನೌಕರ ರಮೇಶಪ್ಪ ಎನ್ನುವವರಿಂದ ಚಿಕ್ಕಜಾಜೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ವಂಚಕ ರಮಣಯ್ಯ ವಿರುದ್ದ ಕಳೆದ ಡಿ. 15. ರಂದು ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಈ ಪ್ರಕರಣ ಸೈಬರ್ ಕ್ರೈಂ ಠಾಣೆಗೆ ವರ್ಗವಾಗಿದೆ. ಆರೋಪಿ ವಿದೇಶದಲ್ಲಿರೋದ್ರಿಂದ ಎಂಬೆಸ್ಸಿ ಪ್ರಕ್ರಿಯೆ ಮೂಲಕ ಆರೋಪಿಯನ್ನ ಬಂಧಿಸೋಕೆ ತಯಾರಿ ನಡೆದಿದೆ.
https://youtu.be/qX9mhxmJaZQ?si=fxNDetm2OAPlAlT-