ಚಾಮರಾಜನಗರ: ರಾಜ್ಯ ಸರ್ಕಾರ ನೀರಾವರಿಗೆ ಮೀಸಲಿಟ್ಟಿದ್ದ ಹಣವನ್ನ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂದಿದೆ. ಈ ಸಲ ನೀರಾವರಿಗೆ ಬರುವಂತಹ ಶೇ. 30 ರಷ್ಟು ಹಣವನ್ನು ಕಡಿತಗೊಳಿಸಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..
ಚಾಮರಾಜನಗರದಲ್ಲಿ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಧರಣಿ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಾಜ್ಯದ ಹಲವೆಡೆ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ..
ದೇಶದ ಸೇನೆ ಕೇವಲ 10% ಜನರ ಕೈಯಲ್ಲಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆ ಮನುಷ್ಯನಿಗೆ ಸ್ವಲ್ಪ ನಾಲೆಡ್ಜ್ ಆದ್ರೂ ಬೇಕು, ಹುಡುಗಾಟದ ಹುಡುಗ ಅಂತ ಅದ್ಯಾವೋ ಪಿಚ್ಚರ್ ಬಂದಿತ್ತಲ್ಲ ಅದಕ್ಕಿಂತ ವರ್ಸ್ಟ್ ಇವ. ಬೇರೆ ದೇಶಕ್ಕೆ ಹೋದಾಗ ಭಾರತದ ಮಾನವನ್ನ ಹರಾಜು ಹಾಕೋದು ಇವನೇ. ಸೇನೆ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಹೇಳಿದರು.
ಸೈನಿಕರಿಗೆ ಯಾವ ಜಾತಿ ಇದೆ ಹೇಳಿ? ಸೈನಿಕರಲ್ಲೂ ಜಾತಿ ಹುಡುಕುವ ನೀನ್ಯಾರು ಭಾರತೀಯನಾ ಅಥವಾ ಇಟಲಿಯವನಾ ಹೇಳೇಕು. ನಮಗಂತೂ ಅರ್ಥ ಆಗ್ತಿಲ್ಲ. ಈವಾಗ ಕೋರ್ಟ್ ನಲ್ಲಿ ಕೇಸ್ ಬೇರೆ ನಡೀತಾ ಇದೆ. ಬಿಹಾರ ಚುನಾವಣೆಯಲ್ಲಿನ ಸೋಲಿನ ಭೀತಿಯಿಂದ ಈ ರೀತಿ ಮಾತನಾಡ್ತಿದ್ದಾರೆ. ಸುಮ್ಮೆ ಅವನ ಬಗ್ಗೆ ಚರ್ಚೆ ಯಾಕೆ? ಕಾಮನ್ ಸೆನ್ಸ್ ಇಲ್ಲೆ ಇರೋ ವ್ಯಕ್ತಿ ಕೇಂದ್ರದಲ್ಲಿ ವಿಪಕ್ಷನಾಯಕನಾಗಿದ್ದಾನೆ. ಇಂತವರನ್ನ ನಾಯಕ ಅನ್ನೋಕೆ ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗ್ಗೇಕು ಎಂದರು.


