ಫ್ರೀಡಂ ಟಿವಿ ಡೆಸ್ಕ್
ನವದೆಹಲಿ; ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಭೇಟಿಯಾಗಲಿದ್ದಾರೆ. ಲೋಕಸಭಾ ಚುನಾವಣೆ ಸನಿಹ ಹೊತ್ತಲ್ಲೇ ಹೆಚ್ಡಿಡಿ ಭೇಟಿ ಭಾರೀ ಕುತೂಹಲ ಮೂಡಿಸಿದ್ದು, ಇಂದು ಬಹುತೇಕ ಲೋಕಸಭೆ ಸೀಟು ಹಂಚಿಕೆ ವಿಷಯವನ್ನು ಚರ್ಚೆ ಮಾಡಲಿವೆ ಎಂದು ಮೂಲಗಳು ತಿಳಿಸಿವೆ.
ಮೋದಿ ಜೊತೆ ಚರ್ಚಿಸಬಹುದಾದ ವಿಷಯಗಳು
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಳಿಕ ಲೋಕಸಭಾ ಚುನಾವಣೆಯ ಅಖಾಡಕ್ಕೆ ಸಜ್ಜಾಗಬೇಕಿದೆ. ಮೊದಲ ಬಾರಿಗೆ ಮೈತ್ರಿ ಸೂಚನೆ ಕೊಟ್ಟಂತಹ ಸಮಯದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ. ನಾಲ್ಕರಿಂದ ಐದು ಕ್ಷೇತ್ರಗಳನ್ನ ಬಿಟ್ಟು ಕೊಡಲು ತೀರ್ಮಾನ ಮಾಡುತ್ತೇವೆ ಎಂಬ ಸಣ್ಣ ಸುಳಿವು ಕೊಟ್ಟಿದ್ದರು. ಅದರಂತೆ ಇಂದು ಹೆಚ್ ಡಿಡಿ ಮೋದಿ ಭೇಟಿ ಎಲ್ಲಾ ಕುತೂಹಲಕ್ಕೂ ತೆರೆ ಎಳೆಯುವ ಸಾಧ್ಯತೆಯಿದೆ.

ಇಂದು ಮೋದಿ ಮುಂದೆ ಈ ಕ್ಷೇತ್ರಗಳ ಬೇಡಿಕೆ ಇಡಲಿರೋ ಹೆಚ್ಡಿಡಿ.
ಹಾಸನ
ಮಂಡ್ಯ
ಚಿಕ್ಕಬಳ್ಳಾಪುರ ಅಥವಾ ಬೆಂಗಳೂರು ಉತ್ತರ
ತುಮಕೂರು
ಬೆಂಗಳೂರು ಗ್ರಾಮಾಂತರ
ಉತ್ತರ ಕರ್ನಾಟಕದಿಂದ ಒಂದು ಕ್ಷೇತ್ರ

ಒಟ್ಟು ಆರು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರೋ ಜೆಡಿಎಸ್ ಇಂದು ಮೋದಿ ಮುಂದೆ ಪ್ರಸ್ತಾಪಿಸಿ ಫೈನಲ್ ಮಾಡಿಕೊಂಡು ಬರೋ ಸಾಧ್ಯತೆಗಳು ಹೆಚ್ಚಿವೆ.
ಕಮಲಪಡೆ ಆತ್ಮವಿಶ್ವಾಸ ಹೆಚ್ಚಿದ ಕೂಡಲೇ ಆಲರ್ಟ್ ಆದ ಜೆಡಿಎಸ್ ನಾಯಕರು.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಆಯ್ಕೆ ಹಾಗೂ ವಿರೋಧ ಪಕ್ಷ ನಾಯಕನ ಆಯ್ಕೆ ಬಳಿಕ ಬಿಜೆಪಿಯಲ್ಲಿ ಚಲನವಲನಗಳು ಹೆಚ್ಚಿವೆ. ಮುಂಬರುವ ಲೋಕಸಭೆ ಚುನಾವಣೆಗೆ ಅಖಾಡ ರೆಡಿಮಾಡಿಕೊಳ್ಳುತ್ತಿದ್ದು, ಇದರ ಜೆಡಿಎಸ್ ನಾಯಕರು ಇಂದು ರಾಷ್ಟ್ರೀಯ ನಾಯಕನ್ನ ಭೇಟಿ ಮಾಡಿ ಲೋಕಸಭಾ ಚುನಾವಣೆಗೆ ಅಖಾಡ ರೆಡಿಮಾಡಿಕೊಳ್ಳ ಬೇಕಿದೆ.