Friday, September 12, 2025
23.4 C
Bengaluru
Google search engine
LIVE
ಮನೆ#Exclusive NewsTop Newsವಾರಣಾಸಿಯಲ್ಲಿ ಇತಿಹಾಸ ಮರುಕಳಿಸುತ್ತಾ? ಮೋದಿಗೆ ಗೆಲುವು ಸುಲಭವಾಯ್ತಾ?

ವಾರಣಾಸಿಯಲ್ಲಿ ಇತಿಹಾಸ ಮರುಕಳಿಸುತ್ತಾ? ಮೋದಿಗೆ ಗೆಲುವು ಸುಲಭವಾಯ್ತಾ?

ನವದೆಹಲಿ; ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ರಿಲೀಸ್ ಮಾಡಿದೆ. ನಿರೀಕ್ಷೆಯಂತೆಯೇ ವಾರಣಾಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಉತ್ತರಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಜಕ್ಷ ಅಜಯ್ ರೈ​ರನ್ನು ಕಣಕ್ಕೆ ಇಳಿಸಿದೆ.

ವಿಶೇಷ ಅಂದರೆ, 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಅಜಯ್ ರೈ ಹೀನಾಯವಾಗಿ ಸೋಲು ಕಂಡಿದ್ದರು. 2014ರಲ್ಲಿ 3.71 ಲಕ್ಷ ಮತಗಳ ಅಂತರದಿಂದ.. 2019ರಲ್ಲಿ 4.79 ಲಕ್ಷ ಮತಗಳ ಅಂತರದಿಂದ ಮೋದಿ ವಿರುದ್ಧ ಅಜಯ್ ರೈ ಪರಾಭವಗೊಂಡಿದ್ದರು. ಆದರೆ, ಮತ್ತೆ ಅದೇ ಅಜಯ್ ರೈ ಮೇಲೆ ವಿಶ್ವಾಸವಿರಿಸಿದ ಕಾಂಗ್ರೆಸ್​, ಅವರನ್ನೇ ಕಣಕ್ಕೆ ಇಳಿಸಿದೆ.

ಇಲ್ಲಿ ಗಮನಿಸಬೇಕಾದ ಅಂಶ ಎಂದರೇ, ಕಳೆದ ಎರಡು ಚುನಾವಣೆಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ಎಲ್ಲಾ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. 2019ರ ಚುನಾವಣೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ವಾರಣಾಸಿಯಲ್ಲಿ ಸ್ಪರ್ಧೆ ಮಾಡಿದ್ದರು. ಹೀಗಾಗಿ ಮೊದಿ ವಿರೋಧಿ ಮತಗಳು ಭಾರೀ ಪ್ರಮಾಣದಲ್ಲಿ ವಿಭಜನೆಗೊಂಡಿದ್ದವು.

ಆದರೆ, ಈ ಬಾರಿ ಅಂತಹ ಪರಿಸ್ಥಿತಿ ಇಲ್ಲ. ಮಾಯಾವತಿ ನೇತೃತ್ವದ ಬಿಎಸ್​ಪಿ ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳು ಐಎನ್​ಡಿಐಎ ಕೂಟದ ರೂಪದಲ್ಲಿ ಮೋದಿ ವಿರುದ್ಧ ಒಂದಾಗಿವೆ. ಐಎನ್​ಡಿಐಎ ಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಅಜಯ್ ರೈ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ವಾರಣಾಸಿ ಕದನ ಕುತೂಹಲ ಕೆರಳಿಸಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments