Tuesday, January 27, 2026
24 C
Bengaluru
Google search engine
LIVE
ಮನೆಜಿಲ್ಲೆಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು, ಇಲ್ಲವಾದರೆ ದೇಶ ಛಿದ್ರ ಛಿದ್ರವಾಗಲಿದೆ

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು, ಇಲ್ಲವಾದರೆ ದೇಶ ಛಿದ್ರ ಛಿದ್ರವಾಗಲಿದೆ

ಹುಬ್ಬಳ್ಳಿ :  ಮುಂದಿನ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಲಿದ್ದು, ಅವರು ಆಗದಿದ್ದರೇ ದೇಶ ಛಿದ್ರ ಛಿದ್ರ ಆಗಲಿದೆ. ನಮ್ಮ ದೇಶವನ್ನು ಈಗಾಗಲೇ ಹರಿದು ತಿನ್ನಲು ಅಕ್ಕಪಕ್ಕದ ದೇಶಗಳು ಕಾಯುತ್ತಿವೆ ಎಂದು ಮಾಜಿ ಸಚಿವ ಎ.ರಾಮದಾಸ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ, ಚಿನ್ನಾದಂತಹ ದೇಶಗಳು ಭಾರತದಲ್ಲಿ ನುಸುಳುವ ಯತ್ನ ನಡೆಸುತ್ತಿದ್ದಾರೆ.

ಈ ವೇಳೆ ದೇಶವನ್ನು ಸುರಕ್ಷಿತವಾಗಿರಲು ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಿ ಮುಂದುವರೆಯುವದು ಅವಶ್ಯವಿದೆ. ದೇಶ ಎಂದರೆ ಮೋದಿ, ಮೋದಿ ಎಂದರೆ ದೇಶ, ಮತ್ತೆ ಬದಲಾವಣೆ ವಿಚಾರವಾಗಿ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಇನ್ನೂ ಜೆಡಿಎಸ್’ನೊಂದಿಗೆ ಮೈತ್ರಿಯಿಂದಾಗಿ ಹಳೆಯ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ. ಆ ಭಾಗದಲ್ಲಿ ಯಾರೇ ಅಭ್ಯರ್ಥಿ ಆದರೂ ಬಿಜೆಪಿ ಗೆಲುವು ನಿಶ್ಚಿತ. ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕರ್ನಾಟಕದಿಂದ ಸಲ್ಲಿಸಿರುವ ಅರ್ಜಿ ರಾಷ್ಟ್ರದಲ್ಲಿಯೇ ಅತ್ಯಾಧುನಿಕ ಆಗಿದೆ.

ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಶೀಘ್ರದಲ್ಲೇ ಫಲಾನುಭವಿಗಳನ್ನು ಆಯ್ಕೆ ಮಾಡಿ, ಯೋಜನೆಯನ್ನು ಜಾರಿಗೊಳಿಸಲಾಗುವುದು. ಪಿಎಂ ಸ್ವನಿಧಿ ಯೋಜನೆಯನ್ನು ಹು-ಧಾ ಮಹಾನಗರ ಪಾಲಿಕೆ ಅತ್ಯುತ್ತಮವಾಗಿ ಜಾರಿಗೊಳಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರದ ಪ್ರಶಸ್ತಿಯನ್ನು ನೀಡಲು ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು. ‌

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments