ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಂಗಳೂರು– ಎರ್ನಾಕುಲಂ ಸೇರಿ ನಾಲ್ಕು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದ್ದಾರೆ.. ಈ ರೈಲುಗಳು ವಾರಣಾಸಿ-ಖಜುರಾಹೊ, ಲಕ್ಷ್ಮೀ-ಸಹಾರನ್‌ಪುರ, ಫಿರೋಜ್‌ಪುರ-ದೆಹಲಿ ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲಿದ್ದು, ದೇಶದ ಹಲವಾರು ಪ್ರದೇಶಗಳಿಗೆ ಸಂಚರಿಸಲಿವೆ.
ವಾರಣಾಸಿ ರೈಲು ನಿಲ್ದಾಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಒಂದು ರೈಲಿಗೆ ಹಸಿರು ನಿಶಾನೆ ತೋರಿಸಲಾಯಿತು, ಉಳಿದ ಮೂರು ರೈಲಿಗೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿಸಲಾಯಿತು.
ಉದ್ಘಾಟನೆಯ ನಂತರ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಕಾರ್ಯಕ್ರಮವನ್ನು ಅಭಿವೃದ್ಧಿಯ ಹಬ್ಬ ಎಂದು ಬಣ್ಣಿಸಿದ್ದು, ಪವಿತ್ರ ನಗರದಲ್ಲಿ ಆಚರಿಸಲಾಗುತ್ತಿರುವ ದೇವ ದೀಪಾವಳಿಯ ಉತ್ಸಾಹಕ್ಕೆ ಇದನ್ನು ಜೋಡಿಸಿದ್ದಾರೆ.
ಇಲ್ಲಿ ಅಭೂತಪೂರ್ವ ದೇವ ದೀಪಾವಳಿ ಆಚರಿಸುವುದನ್ನು ನೋಡಿದ್ದೇನೆ, ಇಂದು ಈ ಅಭಿವೃದ್ಧಿಯ ಹಬ್ಬಕ್ಕೆ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಆರ್ಥಿಕ ಅಭಿವೃದ್ಧಿ, ಮೂಲಸೌಕರ್ಯಗಳನ್ನು ಕಂಡ ದೇಶಗಳು ಇದರಲ್ಲಿ ದೊಡ್ಡ ಪಾತ್ರ ವಹಿಸಿವೆ ಎಂದು ಅವರು ಹೇಳಿದರು.


