ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಜನರಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಹಾಗೆಯೇ ಜನರು ಬೊಜ್ಜು ಕಡಿಮೆ ಮಾಡಿಕೊಳ್ಳಲು ಕರೆ ನೀಡಿದ್ದರು. ಕಡಿಮೆ ಅಡುಗೆ ಎಣ್ಣೆ ಬಳಸುವಂತೆ, ಪ್ರೋಟಿನ್ ಆಹಾರ ಸೇವಿಸುವಂತೆ ಕಿವಿ ಮಾತು ಹೇಳಿದ್ದರು. ಬೊಜ್ಜು ಎಲ್ಲಾ ಆರೋಗ್ಯ ಸಮಸ್ಯೆಯ ಮೂಲ ಕಾರಕ ಅಂತ ವಿವರಿಸಿದ್ರು

ಮನ್ ಕಿ ಬಾತ್ ನಲ್ಲಿ ಮಾತನಾಡಿದ ಮೋದಿ ತಮ್ಮ ಆರೋಗ್ಯ ಗುಟ್ಟನ್ನು ಹೇಳಿಕೊಂಡಿದ್ದರು.. ತಾನು ಸೇವಿಸುವ ಆಹಾರದ ಬಗ್ಗೆ ಮಾಹಿತಿ ನೀಡಿದ್ದರು ವರ್ಷದಲ್ಲಿ ಕನಿಷ್ಠ 300 ದಿನವಾದರು ಕಮಲದ ಬೀಜ (Makhana ತಾವರೆಯ ಬೀಜ) ಸೇವಿಸುತ್ತೇನೆ ಎಂದಿದ್ದರು.

ಫಾಕ್ಸ್‌ನಟ್ ಎಂದು ಕರೆಯಲ್ಪಡುವ ಈ ಬೀಜಗಳ ಸೇವನೆ ನಮ್ಮ ದೇಹಕ್ಕೆ ಉಪಯುಕ್ತವಾಗಿದೆ. ಈ ಕಮಲದ ಬೀಜವನ್ನು ಬಿಹಾರದಲ್ಲಿ ಅತೀ ಹೆಚ್ಚಾಗಿ ಬೆಳೆಯುತ್ತಾರೆ. ಅಲ್ಲಿ ಇದೊಂದು ಸಾಂಪ್ರದಾಯಿಕ ಬೆಳೆಯಾಗಿದೆ.

ಈ ವರ್ಷದ ಬಜೆಟ್‌ನಲ್ಲಿ ಈ ಕಮಲದ ಬೀಜ ಬೆಳೆಯುವ ರೈತರ ಪ್ರಯೋಜನಕ್ಕಾಗಿ ಮಖಾನಾ ಮಂಡಳಿಯನ್ನು ರಚಿಸುವುದಾಗಿ ಸರ್ಕಾರ ಘೋಷಿಸಿದೆ..

ಈ ಕಮಲದ ಬೀಜವನ್ನು ಕರಿ, ಸಿಹಿತಿಂಡಿ ಸೇರಿ ಹಲವು ಖಾದ್ಯಗಳ ತಯಾರಿಕೆಗೆ ಬಳಸಲಾಗುತ್ತಿದೆ. ಉತ್ತರ ಭಾರತದಲ್ಲಿ ಇದೊಂದು ಸಾಂಪ್ರದಾಯಿಕ ಬೆಳೆಯಾಗಿ ನೋಡಲಾಗಿದೆ. ಹೋಗಾಗಿ ಅಲ್ಲಿ ಮಾರುಕಟ್ಟೆಯೂ ವಿಸ್ತರಣೆಯಾಗುತ್ತಿದೆ.

ಈ ಕಮಲದ ಬೀಜವು ಅತ್ಯಧಿಕ ಪ್ರೋಟಿನ್ ಹೊಂದಿರುವ ಅಂಶವಾಗಿದೆ. ಇದರಲ್ಲಿ ಫೈಬರ್, ಕಾರ್ಬೋಹೈಡ್ರೇಟ್‌ಗಳು ಹೇರಳವಾಗಿದೆ. ಜೊತೆಗೆ ಕ್ಯಾಲ್ಸಿಯಂ, ಮೆಗ್ನಿಷಿಯಂ, ಕಬ್ಬಿಣಾಂಶ, ರಂಜಕದಂತಹ ಅಗತ್ಯ ಪೋಷಕಾಂಶದಿಂದ ಇದು ಕೂಡಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲಿದೆ

ಕಮಲದ ಬೀಜವು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ, ಹೀಗಾಗಿ ಇದು ಮಧುಮೇಹಿಗಳಿಗೂ ಸೂಕ್ತ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಇರುವುದರಿಂದ ತೂಕ ಇಳಿಸಲು ಇಚ್ಛಿಸುವವರು ಹಾಗೆ ತೂಕ ನಿಯಂತ್ರಣದಲ್ಲಿಡುವವರು ಕಮಲದ ಬೀಜವನ್ನು ಆಹಾರವಾಗಿ ಸೇವಿಸುವುದು ಬಹಳ ಉತ್ತಮ.

ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಆಕ್ಸಿಡೇಟಿವ್ ಒತ್ತಡವನ್ನು ತಡೆಯಲು ಮತ್ತು ಹಾನಿಕಾರಕ ಸ್ವತಂತ್ರ ರಾಡಿಕಲ್‌ಳಿಂದ ದೇಹಕ್ಕಾಗುವ ಹಾನಿಯನ್ನು ತಡೆಯಲಿದೆ.

Website |  + posts

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ