Wednesday, April 30, 2025
30.3 C
Bengaluru
LIVE
ಮನೆ#Exclusive NewsTop Newsವಕ್ಫ್ ನೋಟಿಸ್ ಅನ್ನೋದೆ ಕಾನೂನು ಬಾಹಿರ: ಸಿ.ಟಿ ರವಿ

ವಕ್ಫ್ ನೋಟಿಸ್ ಅನ್ನೋದೆ ಕಾನೂನು ಬಾಹಿರ: ಸಿ.ಟಿ ರವಿ

ಚಿಕ್ಕಮಗಳೂರು: ವಕ್ಫ್ ನೋಟಿಫಿಕೇಶನ್ ಅನ್ನೋದೇ ಕಾನೂನು ಬಾಹಿರ ಎಂದು ಮಾಜಿ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿ. ಈ ವೇಳೆ, ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿರುವ ವಕ್ಫ್ ಆಸ್ತಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯ ಡಿ.ಆರ್ ಪೊಲೀಸ್ ಗ್ರೌಂಡ್, ರತ್ನಗಿರಿಯ ಜಾಗವನ್ನು ವಕ್ಫ್ ಆಸ್ತಿ ಎಂದು ನೋಟಿಫಿಕೇಶನ್ ಹೊರಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹಳ್ಳಿ-ಹಳ್ಳಿಗೆ ಹೋಗಿ ವಕ್ಫ್ ಅದಾಲತ್ ಮಾಡಿದ್ದು ಯಾರು? ಬಿಜೆಪಿಯವರೋ ಅಥವಾ ಸಚಿವ ಜಮೀರ್ ಅವರೋ? ಸಿದ್ದರಾಮಯ್ಯ ಈಗ ಸುಳ್ಳು ರಾಮಯ್ಯ ಆಗಿದ್ದಾರೆ. ಜಮೀರ್ ಅವರು ಸಿಎಂ ಸೂಚನೆ ಮೇರೆಗೆ ನಾನು ವಕ್ಫ್ ಅದಾಲತ್ ಮಾಡ್ತಿದ್ದೇನೆ ಎಂದಿದ್ದಾರೆ. ಇವರು ಸುಮ್ಮನೆ ಬರ್ತಾರೆ, ಹೋಗ್ತಾರೆ ಎಂದು ಭಾವಿಸಬೇಡಿ ಎಂದು ಜಮೀರ್ ಮಾತನಾಡಿದ್ದ ವೀಡಿಯೋ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ.

ಇದೇ ವೇಳೆ, ಗ್ಯಾರಂಟಿ ವಿಚಾರವಾಗಿ ಮೋದಿ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯರ ವಿರುದ್ಧ ಸಹ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯನವರೇ ನೀವು ಮೋದಿಯವರನ್ನ ಟೀಕೆ ಮಾಡಿದ್ರೆ ಸೂರ್ಯನಿಗೆ ಉಗಿದಂತೆ. ಅದು ನಿಮ್ಮ ಮುಖಕ್ಕೆ ಮೆತ್ತಿಕೊಳ್ಳುತ್ತದೆ. ಅದನ್ನು ನೀವೇ ತೊಳೆದುಕೊಳ್ಳಬೇಕು ಎಂದು ಲೇವಡಿ ಮಾಡಿದ್ದಾರೆ.

ನೀವು ಮೋದಿಯನ್ನ ಬೈದು ದೊಡ್ಡವರಾಗಬಹುದು ಎಂದು ಭಾವಿಸಿದ್ದೀರಿ. ನೀವು ಮೋದಿಗೆ 2014, 2019 ಮತ್ತು 2024ರಲ್ಲಿ ಚಾಲೆಂಜ್ ಮಾಡಿದ್ರಿ. ಜನ ನಿಮ್ಮ ನಾಯಕತ್ವಕ್ಕೆ ಮತ ನೀಡ್ಲಿಲ್ಲ. ಮೋದಿಯವರ ನಾಯಕತ್ವವನ್ನು ಜನ ಒಪ್ಪಿಕೊಂಡಿದ್ದಾರೆ ಎಂದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments