Zameer Ahmed; ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಚಿವ ಜಮೀರ್ ಅಹಮದ್ ಖಾನ್, ಸಂಕಷ್ಟಗಳ ಮೇಲೆ ಸಂಕಷ್ಟಗಳನ್ನ ತಂದಂತೆ ಕಾಣ್ತಿದೆ. ಇತ್ತೀಚೆಗೆ ಸ್ಪೀಕರ್ ವಿಚಾರವಾಗಿ ಮಾತಾಡಿ ವಿವಾದಕ್ಕೆ ಕಾರಣವಾಗಿದ್ದ ಜಮೀರ್ ಈಗ ತನ್ನ ಶೋಕಿಯಿಂದ ಸಿದ್ದು ಸರ್ಕಾರದ ವಿರುದ್ಧ ಜನ ಮುಗಿ ಬೀಳುವಂತೆ ಮಾಡಿದ್ದಾರೆ..

ಯೆಸ್, ಐಶಾರಾಮಿ ಪ್ರವೈಟ್ ಜೆಟ್‌ನಲ್ಲಿ ಸಚಿವ ಜಮೀರ್ ಖಾನ್, ಶೋಕಿ ವಿಡಿಯೋ ಮಾಡಿರೋದು ಈಗ ಜನಾಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗುವೆ ವೇಳೆ ಸಿಎಂ ಸಿದ್ದರಾಮಯ್ಯ ಜೊತೆ ಸಚಿವ ಜಮೀರ್ ಪ್ರವೇಟ್ ಜೆಟ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಈ ವೇಳೆ ವಿಡಿಯೋ ಶೂಟ್ ಮಾಡಿ ತಮ್ಮ ಸೋಶಿಯಲ್ ಮೀಡಿಯದಲ್ಲಿ ಹಂಚಿಕೊಂಡಿರೋ ಜಮೀರ್, ಅದಕ್ಕೆ ಕೆಜಿಎಫ್ ಸಿನಿಮಾದ ಹಾಡು ಸೇರಿಸಿ ಶೋ ಕೊಟ್ಟಿದ್ದಾರೆ. ಈ ವಿಡಿಯೋದಲ್ಲಿ ಸಿಎಂ ಸಿದ್ರಾಮಯ್ಯ, ಕಂದಾಯ ಸಚಿವ ಕೃಷ್ಣಭೈರೇಗೌಡ ಕೂಡ ಇದ್ದಾರೆ. ಇಡಿ ರಾಜ್ಯ ಬರಗಾಲದಿಂದ ತತ್ತರಿಸಿದೆ. ಗ್ಯಾರೆಂಟಿ ಯೋಜನೆಗಳನ್ನ ಸರಿಯಾಗಿ ಜಾರಿಗೆ ತಂದಿಲ್ಲ. ಜನರಿಗೆ 10 ಕೆಜಿ ಅಕ್ಕಿ ಕೊಡುವ ಯೋಗ್ಯತೆ ಇಲ್ಲ. ಅದರೂ ಈ ಶೋಕಿಗೆ ಏನು ಕಮ್ಮಿ ಇಲ್ಲ ಅಂತ ಜನ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಜಮೀರ್ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ರೀತಿಯ ನೆಗೆಟಿವ್ ಕಾಮೆಂಟ್ ಗಳು ಬರ್ತಿವೆ. ಬೆಂಗಳೂರಿಂದ ದೆಹಲಿಗೆ, ದೆಹಲಿಯಿಂದ ಬೆಂಗಳೂರಿಗೆ ಪ್ರತಿ ದಿನ 50ಕ್ಕೂ ಹೆಚ್ಚು ಫ್ಲೈಟ್ ಗಳೀವೆ. ಆದರೂ ಈ ಪ್ರೈವೆಟ್ ಫ್ಲೈಟ್ ಶೋಕಿ ಯಾಕೆ.? ಎಂದು ಜನ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಬಿಜೆಪಿ ಕೂಡ ಟ್ವೀಟ್ ಮಾಡಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದೆ. ರಾಜ್ಯದಲ್ಲಿ ತೀವ್ರ ಬರ ಬಂದು ಜನತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದಾರೆ.ರಾಜ್ಯ ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೆ ಬಂದು ಆರು ತಿಂಗಳು ಮುಗಿದರೂ ಒಂದೇ ಒಂದು ಗುಂಡಿ ಮುಚ್ಚುವ ಕಾಮಗಾರಿ ಕೂಡ ನಡೆದಿಲ್ಲ.

ಆದರೆ, ಮಜವಾದಿ ಸಿದ್ದರಾಮಯ್ಯ ಮತ್ತು ಅವರ ಅತ್ಯಾಪ್ತ ಜಮೀರ್ ಖಾನ್ ಅವರ ಆಡಂಬರಕ್ಕೇನು ಕಡಿಮೆ ಇಲ್ಲ. ಜನರ ತೆರಿಗೆ ದುಡ್ಡಿನಲ್ಲಿ ಪ್ರೈವೇಟ್ ಜೆಟ್ ಒಳಗೆ ಮೋಜು, ಮಸ್ತಿ ಮಾಡುತ್ತಾ ಮಜವಾದಿ ಮುಖ್ಯಮಂತ್ರಿ ನಾಡಿನ ಬಡವರನ್ನು ಅಣುಕಿಸುತ್ತಿರುವುದಕ್ಕೆ ಈ ಅವತಾರವೇ ಸಾಕ್ಷಿ ಎಂದು ಬಿಜೆಪಿ ಕೆಂಡ ಕಾರಿದೆ.
ವಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಸಿದ್ದರಾಮಯ್ಯ ಹಾಗೂ ಜಮೀರ್ ನಡೆಗೆ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ವಿಜಯೇಂದ್ರ ಇಡೀ ರಾಜ್ಯ ಬರದಿಂದ ತತ್ತರಿಸಿದೆ. ಮಳೆ ಇಲ್ಲ, ನೀರಿಲ್ಲ, ಅಭಿವೃದ್ಧಿ ಕೆಲಸ ಆಗ್ತಿಲ್ಲ. ಆದ್ರೂ ಈ ಶೋಕಿಗೆ ಏನೂ ಬರವಿಲ್ಲ ಎಂದು ಕುಹುಕವಾಡಿದ್ದಾರೆ.
ಮತ್ತೊಂದೆಡೆ ಜಮೀರ್ ವಿರುದ್ಧ ಮುಗಿಬಿದ್ದಿರೋ ನೆಟ್ಟಿಗರು, ಜಮೀರ್ ಸದಾ ಸಿದ್ದರಾಮಯ್ಯ ಸುತ್ತಾ ಚೇಲಾ ರೀತಿ ಇರ್ತಾರೆ ಅಂತಾನೂ ಕಾಮೆಂಟ್ ಮಾಡ್ತಿದ್ದಾರೆ. ಸಿದ್ದು ಮರ್ಯಾದೆಯನ್ನ ಜಮೀರ್ ಹರಾಜ್ ಹಾಕ್ತಿದ್ದಾರೆ ಅಂತ ಕೆಲವು ಮಂದಿ ಕಾಮೆಂಟ್ ಮಾಡಿದ್ದಾರೆ. ಒಟ್ನಲ್ಲಿ, ರಾಜ್ಯ ಸಂಕಷ್ಟದಲ್ಲಿ ಇರುವಾಗ ಜಮೀರ್ ಶೋಕಿ ಬೇಕಿತ್ತಾ ಅನ್ನೋ ಚರ್ಚೆ ಜೋರಾಗ್ತಿದೆ.
ಜಮೀರ್ ಶೋಕಿ ಬಗ್ಗೆ ನೀವೇನಂತೀರಿ..? ಕಾಮೆಂಟ್ ಮಾಡಿ..